ವಿಶ್ವ ಲಸಿಕಾ ಸಪ್ತಾಹ : ರಾಯಚೂರು ಜಿಲ್ಲೆಯಲ್ಲಿ ಅಭಿಯಾನ
ರಾಯಚೂರು, 03 ಜೂನ್ (ಹಿ.ಸ.) : ಆ್ಯಂಕರ್ : ವಿಶ್ವ ಲಸಿಕಾ ಸಪ್ತಾಹ ಕಾರ್ಯಕ್ರಮದಡಿ ಪ್ರತಿ ವರ್ಷದಂತೆ ಈ ವರ್ಷವು ಮೇ 26 ರಿಂದ 31ರವರೆಗೆ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದು ಅಭಿಯಾನದಲ್ಲಿ ಒಟ್ಟು 494 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂ
ವಿಶ್ವ ಲಸಿಕಾ ಸಪ್ತಾಹ : ರಾಯಚೂರು ಜಿಲ್ಲೆಯಲ್ಲಿ ಅಭಿಯಾನ


ರಾಯಚೂರು, 03 ಜೂನ್ (ಹಿ.ಸ.) :

ಆ್ಯಂಕರ್ : ವಿಶ್ವ ಲಸಿಕಾ ಸಪ್ತಾಹ ಕಾರ್ಯಕ್ರಮದಡಿ ಪ್ರತಿ ವರ್ಷದಂತೆ ಈ ವರ್ಷವು ಮೇ 26 ರಿಂದ 31ರವರೆಗೆ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದು ಅಭಿಯಾನದಲ್ಲಿ ಒಟ್ಟು 494 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ತಿಳಿಸಿದ್ದಾರೆ.

ಅಭಿಯಾನದಲ್ಲಿ ಗುರಿಗೆ ಮೀರಿ, ಲಸಿಕಾ ವಂಚಿತ 494 ಮಕ್ಕಳಿಗೆ ಪೇಂಟಾ ಲಸಿಕೆ ಹಾಕಲಾಗಿದೆ. ಎಮ್.ಆರ್-1ರ ಲಸಿಕೆಯನ್ನು 427 ಮಕ್ಕಳಿಗೆ ನೀಡಲಾಯಿತು. ಎಮ್.ಆರ್-2ರ ಲಸಿಕೆಯನ್ನು 391 ಮಕ್ಕಳಿಗೆ ನೀಡಲಾಗಿದೆ.

ಜೂನ್ 23ರಿಂದ ವಿಶೇಷ ಲಸಿಕಾ ಅಭಿಯಾನ: ಜೂನ್ 23ರಿಂದ 28ರವರೆಗೆ ವಿಶೇಷ ಲಸಿಕಾ ಅಭಿಯಾನ ನಡೆಯಲಿದ್ದು, ಪ್ರತಿ ಮಂಗಳವಾರ ಮತ್ತು ಗುರುವಾರ ಲಸಿಕಾ ಕಾರ್ಯಕ್ರಮ ನಡೆಯುತ್ತದೆ.

ವಿಶೇಷ ಲಸಿಕಾ ಸಪ್ತಾಹ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕಾಡುವ 12 ಮಾರಕ ರೋಗಗಳ ನಿಯಂತ್ರಣದ ಲಸಿಕೆಗಳನ್ನು ಹಾಕಲಾಗುತ್ತದೆ. ಕಾಲಕಾಲಕ್ಕೆ ಲಸಿಕೆ ಪಡೆಯದೇ ಇರುವ ಹಾಗೂ ಬಿಟ್ಟು ಹೋದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ ದೊಡ್ಡಿ ತಾಂಡಾ ಹಾಗೂ ನಗರದ ಕೊಳಚೆ ಪ್ರದೇಶಗಳಲ್ಲಿ, ಆರೋಗ್ಯ ಸೇವೆ ಒದಗಿಸುವ ಸಿಬ್ಬಂದಿ ಖಾಲಿ ಇರುವ ಪ್ರದೇಶಗಳಲ್ಲಿ, ಧಡಾರ ರೋಗ ಕಾಣಿಸಿಕೊಂಡ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಲಸಿಕೆ ಹಾಕಲಾಗುವುದು, ಪೆಂಟಾ ಮೊದಲನೇ ಡೋಸ್ ಪಡೆಯದೇ ಇರುವ ಮಕ್ಕಳಿಗೆ ಮತ್ತು ಎಮ್.ಆರ್.-1 ಹಾಗೂ 2ರ ಲಸಿಕೆ ವಂಚಿತ ಮಕ್ಕಳಿಗೆ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತದೆ.

ರಾಯಚೂರು ಜಿಲ್ಲಾದ್ಯಂತ ಎಲ್ಲಾ ನಗರ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಲಸಿಕಾ ವಂಚಿತ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬಂದು ಲಸಿಕೆ ಹಾಕಿಸುವುದರ ಮೂಲಕ ಈ ಅಭಿಯಾನದ ಸದುಪಯೋಗ ಪಡೆದಿಕೊಳ್ಳಬೇಕೆಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande