ಆಪರೇಷನ್ ಸಿಂಧೂರ್ ವೇಳೆ ಬೇಹುಗಾರಿಕೆ : ಐಎಸ್‌ಐ ಸಂಪರ್ಕಿತ ಗಗನ್‌ದೀಪ್ ಬಂಧನ
ಚಂಡೀಗಡ, 03 ಜೂನ್ (ಹಿ.ಸ.) : ಆ್ಯಂಕರ್ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ನಡೆದ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತೀಯ ಸೇನೆಯ ಚಲನವಲನ ಮಾಹಿತಿ ಪಾಕಿಸ್ತಾನದ ಐಎಸ್‌ಐಗೆ ನೀಡಿದ ಆರೋಪದ ಮೇಲೆ ಪಂಜಾಬ್‌ನ ಗಗನ್‌ದೀಪ್ ಸಿಂಗ್ ಎಂಬ ಗೂಢಚಾರನನ್ನು ಬಂಧಿಸಲಾಗಿದೆ. ಆತ ಖಲಿಸ್ತಾನಿ ಉಗ್ರ ಗೋಪಾಲ್ ಸಿಂ
Arrest


ಚಂಡೀಗಡ, 03 ಜೂನ್ (ಹಿ.ಸ.) :

ಆ್ಯಂಕರ್ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ನಡೆದ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತೀಯ ಸೇನೆಯ ಚಲನವಲನ ಮಾಹಿತಿ ಪಾಕಿಸ್ತಾನದ ಐಎಸ್‌ಐಗೆ ನೀಡಿದ ಆರೋಪದ ಮೇಲೆ ಪಂಜಾಬ್‌ನ ಗಗನ್‌ದೀಪ್ ಸಿಂಗ್ ಎಂಬ ಗೂಢಚಾರನನ್ನು ಬಂಧಿಸಲಾಗಿದೆ. ಆತ ಖಲಿಸ್ತಾನಿ ಉಗ್ರ ಗೋಪಾಲ್ ಸಿಂಗ್ ಚಾವ್ಲಾ ಜೊತೆಗೆ ಸಂಪರ್ಕದಲ್ಲಿದ್ದು, ಕಳೆದ ಐದು ವರ್ಷಗಳಿಂದ ಐಎಸ್‌ಐಗೆ ಮಾಹಿತಿ ಹಂಚುತ್ತಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪಂಜಾಬ್ ಡಿಜಿಪಿ ತಿಳಿಸಿದ್ದಾರೆ.

ಬಂಧಿತನ ಫೋನ್‌ನಲ್ಲಿ 20 ಕ್ಕೂ ಹೆಚ್ಚು ಐಎಸ್‌ಐ ಸಂಪರ್ಕಗಳ ಮಾಹಿತಿ ಪತ್ತೆಯಾಗಿದ್ದು, ರಾಷ್ಟ್ರದ ಭದ್ರತೆಗೆ ಗಂಭೀರ ಬೆದರಿಕೆಯಾಗಿ ಪರಿಗಣಿಸಲಾಗಿದೆ. ಭದ್ರತಾ ಸಂಸ್ಥೆಗಳು ರಾಜ್ಯಗಳಲ್ಲಿ ತನಿಖೆ ತೀವ್ರಗೊಳಿಸಿದ್ದು, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ 12 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande