ಕೀಟ ಸಂಗ್ರಹಗಾರರ ಹುದ್ದೆ : ಅರ್ಜಿ ಆಹ್ವಾನ
ರಾಯಚೂರು, 03 ಜೂನ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ವಿಬಿಡಿಸಿ ಕಾರ್ಯಕ್ರಮಗಳ ಅಡಿಯಲ್ಲಿ 2025-26 ನೇ ಸಾಲಿಗೆ ಮಂಜೂರಾದ ಒಂದು ಕೀಟ ಸಂಗ್ರಹಗಾರರ ಹುದ್ದೆಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಗುತ
ಕೀಟ ಸಂಗ್ರಹಗಾರರ ಹುದ್ದೆ : ಅರ್ಜಿ ಆಹ್ವಾನ


ರಾಯಚೂರು, 03 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ವಿಬಿಡಿಸಿ ಕಾರ್ಯಕ್ರಮಗಳ ಅಡಿಯಲ್ಲಿ 2025-26 ನೇ ಸಾಲಿಗೆ ಮಂಜೂರಾದ ಒಂದು ಕೀಟ ಸಂಗ್ರಹಗಾರರ ಹುದ್ದೆಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ವಿವರ: ಜಿಲ್ಲಾ ವಿಬಿಡಿಸಿ ಕಾರ್ಯಕ್ರಮದ ಅಡಿಯಲ್ಲಿ 2025-26ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ (ಹಣಕಾಸು ವರ್ಷ) ಅವಧಿಗೆ ಒಪ್ಪಂದದ ಸೇವಾ ಒಪ್ಪಂದದ ನಿಯಮನುಸಾರ ಮಲೇರಿಯಾ ಮತ್ತು ಇಎಲ್‍ಎಫ್ ನಿರ್ಮೂಲನೆ ಮತ್ತು ಡೆಂಗೆ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಜಿಲ್ಲೆಗೆ 1 ಕೀಟ ಸಂಗ್ರಾಹಕರರ ಹುದ್ದೆ ಮಂಜುರಾಗಿದ್ದು, ಈ ಹುದ್ದೆಗೆ ವಿಜ್ಞಾನ ವಿಷಯವನ್ನು ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರುವ ಹಾಗೂ ನೇರ ಸಂದರ್ಶನದ ದಿನಾಂಕದಂದು 40 ವರ್ಷ ಮೀರಿರದ ಅರ್ಹ ಅಭ್ಯರ್ಥಿಗಳು ಜೂನ್ 10ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಾರ್ಯಾಲಯಕ್ಕೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯೊಳಗಾಗಿ ಇಚ್ಚೆಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರದೊಂದಿಗೆ ವಿದ್ಯಾಭ್ಯಾಸದ ಪ್ರಮಾಣ ಪತ್ರ ಹಾಗೂ ಅನುಭವ ಪ್ರಮಾಣ ಪತ್ರ ಮತ್ತು ಇತರೇ ಪ್ರಮಾಣ ಪತ್ರಗಳನ್ನು ಜೆರಾಕ್ಸ್ ಪ್ರತಿಗಳಿಗೆ ಗೆಜಿಟೆಡ್ ಅಧಿಕಾರಿಗಳಿಂದ ಧೃಡೀಕರಿಸಿ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಈ ನೇಮಕಾತಿಯು ಎನ್.ಹೆಚ್.ಎಂ. ಹಾಗೂ ಎನ್.ಯು.ಹೆಚ್.ಎಂ. ನಿಯಮಾವಳಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆಂದು ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande