ಕಮಲ್ ಹಾಸನ್‌ಗೆ ಉಚ್ಚ ನ್ಯಾಯಾಲಯ ತರಾಟೆ
ಬೆಂಗಳೂರು, 03 ಜೂನ್ (ಹಿ.ಸ.) : ಆ್ಯಂಕರ್ : ಕನ್ನಡ ಭಾಷೆಗೆ ವಿರೋಧಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳದ ನಟ ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವ ಬಗ್ಗೆ ಅಡಚಣೆ ಎದುರಾಗಿದೆ. ಚಿತ್ರದ ಭದ್ರತೆಗಾಗಿ ಕಮಲ್ ಹಾಸನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿ
Court


ಬೆಂಗಳೂರು, 03 ಜೂನ್ (ಹಿ.ಸ.) :

ಆ್ಯಂಕರ್ : ಕನ್ನಡ ಭಾಷೆಗೆ ವಿರೋಧಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳದ ನಟ ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವ ಬಗ್ಗೆ ಅಡಚಣೆ ಎದುರಾಗಿದೆ. ಚಿತ್ರದ ಭದ್ರತೆಗಾಗಿ ಕಮಲ್ ಹಾಸನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.

ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ,

“ಕ್ಷಮೆ ಕೇಳಿದರೆ ಸಮಸ್ಯೆಯೇ ಇರುವುದಿಲ್ಲ. ಕ್ಷಮೆ ಕೇಳದೆ ಭದ್ರತೆ ಕೇಳುವುದು ಸಮಂಜಸವಲ್ಲ” ಎಂದು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿತು.

ಕಮಲ್ ಹಾಸನ್ ವಕೀಲರಿಗೆ ಮಧ್ಯಾಹ್ನ 2.30ರವರೆಗೆ ಗಡುವು ನೀಡಲಾಗಿದ್ದು, ಅವರ ನಿಲುವು ಸ್ಪಷ್ಟಪಡಿಸಲು ಸೂಚಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande