ಕಲಬುರಗಿ, 3 ಜೂನ್ (ಹಿ.ಸ.):
ಆ್ಯಂಕರ್:ಮಾರ್ಚ್ 16ರಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಾಂಘ್ವಿ ಬೆಣ್ಣೆತೋರ ಹಿನ್ನೀರಿನಲ್ಲಿ ನಡೆದ ರಾಹುಲ್ ಖಜೂರೆ (28) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಪೃಥ್ವಿರಾಜ್ ನನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ.
ರಾಹುಲ್‌ನನ್ನು ಕೊಲೆ ಮಾಡಿ ತೀರ್ಥಯಾತ್ರೆ ನೆಪದಲ್ಲಿ ಪ್ರಯಾಗ್‌ರಾಜ್, ಕಾಶಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮೂರು ತಿಂಗಳು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣ ಕುರಿತು ಇದುವರೆಗೂ 10 ಜನ ಆರೋಪಿಗಳ ಬಂಧನವಾಗಿದ್ದು, ತನಿಖೆ ಮುಂದುವರೆದಿದೆ ಎಂದು ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Samarth biral