ಇಸ್ರೇಲ್ : ಹಮಾಸ್ ಉನ್ನತ ಕಮಾಂಡರ್ ಇಸಾ ಅಲ್-ಇಸಾ ಹತ್ಯೆ
ಟೆಲ್ ಅವಿವ್, 29 ಜೂನ್ (ಹಿ.ಸ.) : ಆ್ಯಂಕರ್ : ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಘರ್ಷಣೆಯ ನಡುವೆ, ಇಸ್ರೇಲ್ ರಕ್ಷಣಾ ಪಡೆ ಮಹತ್ವದ ಘೋಷಣೆ ಹೊರಡಿಸಿದೆ. ಹಮಾಸ್‌ನ ಮಿಲಿಟರಿ ವಿಭಾಗದ ಸ್ಥಾಪಕರಲ್ಲೊಬ್ಬರಾಗಿದ್ದ ಹಖಮ್ ಮುಹಮ್ಮದ್ ಇಸಾ ಅಲ್-ಇಸಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಐಡಿಎಫ್ ತಿಳಿ
ಇಸ್ರೇಲ್ : ಹಮಾಸ್ ಉನ್ನತ ಕಮಾಂಡರ್ ಇಸಾ ಅಲ್-ಇಸಾ ಹತ್ಯೆ


ಟೆಲ್ ಅವಿವ್, 29 ಜೂನ್ (ಹಿ.ಸ.) :

ಆ್ಯಂಕರ್ : ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಘರ್ಷಣೆಯ ನಡುವೆ, ಇಸ್ರೇಲ್ ರಕ್ಷಣಾ ಪಡೆ ಮಹತ್ವದ ಘೋಷಣೆ ಹೊರಡಿಸಿದೆ. ಹಮಾಸ್‌ನ ಮಿಲಿಟರಿ ವಿಭಾಗದ ಸ್ಥಾಪಕರಲ್ಲೊಬ್ಬರಾಗಿದ್ದ ಹಖಮ್ ಮುಹಮ್ಮದ್ ಇಸಾ ಅಲ್-ಇಸಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಐಡಿಎಫ್ ತಿಳಿಸಿದೆ.

ಅವರು ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆದ ದಾಳಿಗೆ ಮಾಸ್ಟರ್‌ಮೈಂಡ್ ಎಂದು ಪರಿಗಣಿಸಲಾಗುತ್ತಿತ್ತು.

ಐಡಿಎಫ್ ಶನಿವಾರ ತಡರಾತ್ರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಅಲ್-ಇಸಾ ಹಮಾಸ್‌ನ ಶಸ್ತ್ರಸಜ್ಜಿತ ಘಟಕದ ಪ್ರಮುಖ ನಾಯಕನಾಗಿದ್ದು, ಸಂಘಟನೆಯ ಬಲವರ್ಧನೆ, ಉಗ್ರ ತರಬೇತಿ ಶಿಬಿರಗಳ ನಿರ್ವಹಣೆ ಮತ್ತು ದಾಳಿಯ ಯೋಜನೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಐಡಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಇಸ್ರೇಲ್ ಸೇನೆ ಪ್ರಕಾರ, ಈ ಹತ್ಯೆ ಒಂದು ಪ್ರಮುಖ ಕಾರ್ಯಚಟುವಟಿಕೆಯ ಭಾಗವಾಗಿದ್ದು, ಅಕ್ಟೋಬರ್ 7ರ ದಾಳಿಗೆ ಭಾಗಿಯಾಗಿದ್ದ ಎಲ್ಲಾ ಹಮಾಸ್ ಉಗ್ರರನ್ನು ಶೋಧಿಸಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರೂಪಿಸಿರುವ ಕಾರ್ಯತಂತ್ರದಲ್ಲಿ ಇದು ಒಂದಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande