ಯೋಗ ದಿನ ಜಾಗತಿಕ ಚಳವಳಿ : ಪ್ರಧಾನಿ ಮೋದಿ
ನವದೆಹಲಿ, 29 ಜೂನ್ (ಹಿ.ಸ.) : ಆ್ಯಂಕರ್ : ಜೂನ್ 21ರಂದು ಆಚರಿಸಲಾದ ಯೋಗ ದಿನದ ಯಶಸ್ಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಶ್ಲಾಘಿಸಿದರು. 10 ವರ್ಷಗಳಲ್ಲಿ ಯೋಗ ದಿನವು ಜಾಗತಿಕ ಮಾದರಿ ಚಳವಳಿಯಾಗಿ ಪರಿಗಣನೆಗೆ ಬಂದಿರುವುದಾಗಿ ಅವರು ಹೇಳಿದರು. ಈ ಬಾರಿ ವಿಶಾಖಪಟ್ಟಣ
Pm


ನವದೆಹಲಿ, 29 ಜೂನ್ (ಹಿ.ಸ.) :

ಆ್ಯಂಕರ್ : ಜೂನ್ 21ರಂದು ಆಚರಿಸಲಾದ ಯೋಗ ದಿನದ ಯಶಸ್ಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಶ್ಲಾಘಿಸಿದರು. 10 ವರ್ಷಗಳಲ್ಲಿ ಯೋಗ ದಿನವು ಜಾಗತಿಕ ಮಾದರಿ ಚಳವಳಿಯಾಗಿ ಪರಿಗಣನೆಗೆ ಬಂದಿರುವುದಾಗಿ ಅವರು ಹೇಳಿದರು.

ಈ ಬಾರಿ ವಿಶಾಖಪಟ್ಟಣಂ ಕಡಲತೀರದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರ ಸಹಭಾಗಿತ್ವ, 2000ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳಿಂದ 108 ಸೂರ್ಯ ನಮಸ್ಕಾರಗಳು, ಹಿಮಾಲಯದ ಶಿಖರ, ನೌಕಾ ಹಡಗು, ಚೆನಾಬ್ ಸೇತುವೆ, ದೆಹಲಿ ಯಮುನಾ ತೀರ, ಹಾಗೂ ತೆಲಂಗಾಣದಲ್ಲಿ 3000 ದಿವ್ಯಾಂಗರಿಂದ ನಡೆದ ಯೋಗ ಪ್ರದರ್ಶನಗಳ ಕುರಿತು ಅವರು ಪ್ರಸ್ತಾಪಿಸಿದರು.

ಈ ವರ್ಷದ ವಿಷಯವಾಗಿದ್ದ “ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ” ಎಂಬುದು ‘ವಸುಧೈವ ಕುಟುಂಬಕಂ’ ತತ್ತ್ವವನ್ನು ಪ್ರತಿಪಾದಿಸುತ್ತಿದೆ ಎಂದು ಮೋದಿ ಹೇಳಿದರು. ನ್ಯೂಯಾರ್ಕ್, ಲಂಡನ್, ಟೋಕಿಯೋ, ಪ್ಯಾರಿಸ್ ಸೇರಿ ವಿಶ್ವದ ಹಲವೆಡೆ ಯೋಗದ ಉತ್ಸಾಹ ಕಂಡು ಬಂದಿದ್ದು ಯೋಗವನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳಿ ಎಂದು ಪ್ರಧಾನಿ ದೇಶವಾಸಿಗಳಿಗೆ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande