ಜೈಸಲ್ಮೇರ್, 29 ಜೂನ್ (ಹಿ.ಸ.) :
ಆ್ಯಂಕರ್ : ಜೈಸಲ್ಮೇರ್‌ನ ಸಧೇವಾಲಾ ಗಡಿ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿರುವ 18 ವರ್ಷದ ಯುವಕ ಮತ್ತು ಅಪ್ರಾಪ್ತ ಬಾಲಕಿಯ ಶವಗಳು ಪತ್ತೆಯಾಗಿವೆ.
ಸ್ಥಳದಲ್ಲಿ ಪಾಕಿಸ್ತಾನಿ ಸಿಮ್ ಕಾರ್ಡ್ ಮತ್ತು ಗುರುತಿನ ಚೀಟಿಗಳು ಸಿಕ್ಕಿದ್ದು, ಮೃತರು ಪಾಕಿಸ್ತಾನೀಯರಾಗಿರಬಹುದೆಂದು ಶಂಕಿಸಲಾಗಿದೆ.
ಶವಗಳನ್ನು ರಾಮಗಢ ಸಿಎಚ್‌ಸಿಗೆ ಕಳುಹಿಸಲಾಗಿದೆ. ಬಿಎಸ್‌ಎಫ್, ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಉಗ್ರಚಟುವಟಿಕೆ, ಬೇಹುಗಾರಿಕೆ ಅಥವಾ ಕಳ್ಳಸಾಗಣೆ ಸಂಬಂಧ ತನಿಖೆ ಆರಂಭಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa