ಮೋದಿ ಮಾರ್ಗದರ್ಶಿ ಮಂಡಳಿಗೆ ಹೋಗಲಿದ್ದಾರೆ:ರಾಜಣ್ಣ
ತುಮಕೂರು, 28 ಜೂನ್ (ಹಿ.ಸ.): ಆ್ಯಂಕರ್: ಬಿಜೆಪಿ ಮಾರ್ಗದರ್ಶಕ ಮಂಡಳಿ ನಿಯಮ ಮಾಡಿಕೊಂಡಿರುವಂತೆ 75 ವರ್ಷ ಆದವರೆಲ್ಲ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ. ಮೋದಿಗೂ 75 ವರ್ಷ ಆಯಿತು, ಅವರೂ ಮಾರ್ಗದರ್ಶಕ ಮಂಡಳಿಗೆ ಹೋಗಬೇಕು. ಪ್ರಧಾನ ಮಂತ್ರಿ ಬೇರೆಯವರು ಆಗಬೇಕು. ಅವರೇ ಮಾಡಿಕೊಂಡಿರುವ ಕಾನೂನು. ಇದು ಮೋದಿಯ
ಮೋದಿ ಮಾರ್ಗದರ್ಶಿ ಮಂಡಳಿಗೆ ಹೋಗಲಿದ್ದಾರೆ:ರಾಜಣ್ಣ


ತುಮಕೂರು, 28 ಜೂನ್ (ಹಿ.ಸ.):

ಆ್ಯಂಕರ್:

ಬಿಜೆಪಿ ಮಾರ್ಗದರ್ಶಕ ಮಂಡಳಿ ನಿಯಮ ಮಾಡಿಕೊಂಡಿರುವಂತೆ 75 ವರ್ಷ ಆದವರೆಲ್ಲ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ. ಮೋದಿಗೂ 75 ವರ್ಷ ಆಯಿತು, ಅವರೂ ಮಾರ್ಗದರ್ಶಕ ಮಂಡಳಿಗೆ ಹೋಗಬೇಕು. ಪ್ರಧಾನ ಮಂತ್ರಿ ಬೇರೆಯವರು ಆಗಬೇಕು. ಅವರೇ ಮಾಡಿಕೊಂಡಿರುವ ಕಾನೂನು. ಇದು ಮೋದಿಯವರಿಗೂ ಅನ್ವಯವಾಗುತ್ತದೆ. ಅದು ರಾಜಕೀಯ ಬದಲಾವಣೆ ಅಲ್ವಾ? ಅದನ್ನೇ ನಾನು ಕ್ರಾಂತಿ ಎಂದು ಹೇಳಿದ್ದೇನೆ ಎಂದು ಸಹಕಾರ ಖಾತೆ ಸಚಿವ ಕೆ. ಎನ್ ರಾಜಣ್ಣ ತಮ್ಮ ಹೇಳಿಕೆ ಕುರಿತು ಸ್ಪಷ್ಟಪಡಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ರಾಷ್ಟ್ರಮಟ್ಟದಲ್ಲಿ ಕ್ರಾಂತಿ ಆಗಲಿದೆ ಎಂದು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಿದ್ದೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿಯೂ ಕೂಡ ಅನೇಕ ಶಾಸಕರು ಕೂಡ ಸಚಿವರಾಗಿ ಹಾಗೂ ಮುಖ್ಯಮಂತ್ರಿಗಳಾಗಬೇಕೆಂಬ ಆಶಯ ಹೊಂದಿದ್ದಾರೆ. ರಾಜಕಾರಣ ನಿಂತ ನೀರಲ್ಲ. ಹೀಗಾಗಿ, ಬದಲಾವಣೆಗಳು ನಿರಂತರವಾಗಿ ನಡೆಯುತ್ತಿರುತ್ತವೆ ಎಂದು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande