ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಸುಮನಾಗೆ ಎಂ.ಕಾ0ನಲ್ಲಿ ಐದನೇ ರ‍್ಯಾಂಕ್
ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಸುಮನಾಗೆ ಎಂ.ಕಾ0ನಲ್ಲಿ ಐದನೇ ರ‍್ಯಾಂಕ್
ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಸುಮನಾ ಎಂ.ಕಾ0ನಲ್ಲಿ ಬೆಂಗಳೂರು ಉತ್ತರ ವಿ.ವಿ. ಮಟ್ಟದಲ್ಲಿ ೫ನೇ ರ‍್ಯಾಂಕ್ ಪಡೆದಿದ್ದಾರೆ.


ಕೋಲಾರ, ೨೮ ಜೂನ್ (ಹಿ.ಸ) :

ಆ್ಯಂಕರ್ : ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದ ದಯಾನಂದ ಮಮತಾ ಅವರ ದ್ವಿತೀಯ ಪುತ್ರಿ ಸುಮನಾ.ಡಿ. ಶೇಕಡಾ ೮೭.೩೮ ಅಂಕಗಳನ್ನು ಪಡೆದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಐದನೇ ಶ್ರೇಣಿ ಪಡೆಯುವ ಮೂಲಕ ಕಾಲೇಜು ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆಸಿದರು ನಂತರ ಪಿಯು ವಿದ್ಯಾಭ್ಯಾಸವನ್ನು ಸುಂದರಪಾಳ್ಯ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು. ಆ ನಂತರ ಪದವಿ ಶಿಕ್ಷಣವನ್ನು ಕೆಜಿಎಫ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಿ ನಂತರ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಕಾಲೇಜಿನಲ್ಲಿ ಸ್ನಾತಕೋತ್ತರ (ಎಂ.ಕಾಮ್) ವಿದ್ಯಾಭ್ಯಾಸವನ್ನು ಮಾಡಿ ಕಳೆದ ಅಕ್ಟೋಬರ್ ೨೦೨೪ ರಂದು ನಡೆದ ಪರೀಕ್ಷೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಶ್ರೀ ಭಗವಾನ್ ಮಹಾವೀರ ಜೈನ್ ಕಾಲೇಜಿನಲ್ಲಿ ಅತ್ಯುತ್ತಮವಾದ ಸಾಧನೆಯನ್ನು ಮಾಡಿದ್ದಾರೆ.

ಸುಮನಾ ಮಾತನಾಡಿ ನಾನು ಗ್ರಾಮೀಣ ಭಾಗದ ಕುಟುಂಬದಲ್ಲಿ ಜನಿಸಿ ಚಿಕ್ಕಂದಿನಿ0ದಲೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದೇನೆ. ಪಿಯು ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಕಾರಣ ನಮ್ಮ ಪೋಷಕರು ಕೆಜಿಎಫ್ ನಗರದ ಶ್ರೀ ಭಗವಾನ್ ಮಹಾವೀರ ಜೈನ್ ಕಾಲೇಜಿನಲ್ಲಿ ದಾಖಲಾತಿಯನ್ನು ಮಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗ್ರಾಮೀಣ ಭಾಗದಲ್ಲಿ ಐದನೇ ಶ್ರೇಣಿ ಪಡೆದಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.

ಈ ಸಾಧನೆ ಮಾಡಲು ಪ್ರೋತ್ಸಾಹ ನೀಡಿದ ಶ್ರೀ ಭಗವಾನ್ ಮಹಾವೀರ ಜೈನ್ ಕಾಲೇಜು ಪ್ರಾಂಶುಪಾಲರಾದ ರೇಖಾ ಸೇತಿ,ಎಂ.ಕಾಮ್ ವಿಭಾಗದ ಮುಖ್ಯಸ್ಥರಾದ ಅಂತೋಣಿ ಗ್ರೋಜ್ ಹಾಗೂ ಕಾಲೇಜು ಸಿಬ್ಬಂದಿ ವರ್ಗದವರು ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.

ಚಿತ್ರ : ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಸುಮನಾ ಎಂ.ಕಾ0ನಲ್ಲಿ ಬೆಂಗಳೂರು ಉತ್ತರ ವಿ.ವಿ. ಮಟ್ಟದಲ್ಲಿ ೫ನೇ ರ‍್ಯಾಂಕ್ ಪಡೆದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande