ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ; ಆಸ್ಟ್ರೇಲಿಯಾ ಗೆಲುವು
ಬ್ರಿಡ್ಜ್‌ಟೌನ್, 28 ಜೂನ್ (ಹಿ.ಸ.) : ಆ್ಯಂಕರ್ : ಜೋಶ್ ಹ್ಯಾಝೆಲ್‌ವುಡ್ (5/43) ಅವರ ಮಾರಕ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ಬಾರ್ಬಡೋಸ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 159 ರನ್‌ಗಳಿಂದ ಸೋಲಿಸಿದೆ. ಕೇವಲ ಮೂರು ದಿನಗಳಲ್ಲೇ ಪಂದ್ಯ ಅಂತ್ಯ ಕಂಡಿದ್ದು, ಆಸ್ಟ್ರೇಲಿಯಾ ಈ ಮೂಲಕ ಸರಣಿಯಲ್ಲಿ
Cricket


ಬ್ರಿಡ್ಜ್‌ಟೌನ್, 28 ಜೂನ್ (ಹಿ.ಸ.) :

ಆ್ಯಂಕರ್ : ಜೋಶ್ ಹ್ಯಾಝೆಲ್‌ವುಡ್ (5/43) ಅವರ ಮಾರಕ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ಬಾರ್ಬಡೋಸ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 159 ರನ್‌ಗಳಿಂದ ಸೋಲಿಸಿದೆ. ಕೇವಲ ಮೂರು ದಿನಗಳಲ್ಲೇ ಪಂದ್ಯ ಅಂತ್ಯ ಕಂಡಿದ್ದು, ಆಸ್ಟ್ರೇಲಿಯಾ ಈ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನ್ನು ನಾಥನ್ ಲಿಯಾನ್ ಕೊನೆಗೊಳಿಸಿದರು. ಪಂದ್ಯದಲ್ಲಿ ಟ್ರಾವಿಸ್ ಹೆಡ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ್ದಕ್ಕಾಗಿ 'ಪಂದ್ಯಶ್ರೇಷ್ಠ' ಪಟ್ಟಕ್ಕೆ ಪಾತ್ರರಾದರು.

ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ಕ್ಯಾರಿ (65), ವೆಬ್‌ಸ್ಟರ್ (63) ಮತ್ತು ಹೆಡ್ (61) ಮಿಂಚಿದರೆ, ವೆಸ್ಟ್ ಇಂಡೀಸ್ ಪರ ಶಮರ್ ಜೋಸೆಫ್ 5 ವಿಕೆಟ್ ಮತ್ತು 44 ರನ್‌ಗಳೊಂದಿಗೆ ಒಳ್ಳೆಯ ಪ್ರದರ್ಶನ ನೀಡಿದರು.

ಸ್ಕೋರ್‌ ವಿವರ..

ಆಸ್ಟ್ರೇಲಿಯಾ: 180 & 310

ವೆಸ್ಟ್ ಇಂಡೀಸ್: 190 & 141

ಫಲಿತಾಂಶ: ಆಸ್ಟ್ರೇಲಿಯಾ 159 ರನ್‌ಗಳಿಂದ ಗೆಲುವು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande