ಗದಗ, 28 ಜೂನ್ (ಹಿ.ಸ.)
ಆ್ಯಂಕರ್:- ಗದಗ ಬೆಟಗೇರಿಯ ಅವಳಿ ನಗರಕ್ಕೆ ದಿನಾಂಕ:19-06-2025 ರಿಂದ 27-06-2025 ರವರೆಗೆ ವಿವಿಧ ತಾಂತ್ರಿಕ ದೋಷಗಳಿಂದ ತುಂಗಭದ್ರಾ ನದಿ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಈಗಾಗಲೇ ಈ ಕುರಿತು ದಿನಂಪ್ರತಿ ಪತ್ರಿಕೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಗಮನಕ್ಕೆ ತರಲಾಗಿದೆ.
ದಿನಾಂಕ:28-06-2025 ರಿಂದ ಯಥಾವತ್ತಾಗಿ ಅವಳಿ ನಗರದಲ್ಲಿ ತುಂಗಭದ್ರಾ ನದಿಯ ಕುಡಿಯುವ ನೀರಿನ ಪೂರೈಕೆಯನ್ನು ಪ್ರಾರಂಭಿಸಲಾಗಿದೆ. ಒಂದು ವೇಳೆ ನೀರು ಪೂರೈಕೆಯಲ್ಲಿ ವಿಳಂಬವಾದ ಪ್ರದೇಶಗಳಿಗೆ ಈ ಕಚೇರಿಯಿಂದ ನಿಯೋಜಿಸಲಾದ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆಯನ್ನು ಉಚಿತವಾಗಿ ಮಾಡಲಾಗುವುದು.
ದಯವಿಟ್ಟು ಸಾರ್ವಜನಿಕರು ನಗರಸಭೆ ಕಚೇರಿಯೊಂದಿಗೆ ಸಹಕರಿಸಲು ವಿನಂತಿಸಲಾಗಿದೆ ಹಾಗೂ ಈ ಮುಂದಿನ ದಿನಗಳಲ್ಲಿ ವಾರ್ಡುಗಳಲ್ಲಿ ನೀರಿನ ಪೂರೈಕೆಯ ಸಮಸ್ಯೆ ಉಂಟಾಗಿದ್ದಲ್ಲಿ ವಾರ್ಡ ನಂ. 1 ರಿಂದ 17 - ಶ್ರೀ ಮತಿ ಸಿಂಧೂ ಕಿರಿಯ ಅಭಿಯಂತರರು ಮೋಬೈಲ್ ಸಂಖ್ಯೆ: 8088498021 ಹಾಗೂ ವಾರ್ಡ ನಂ 18 ರಿಂದ 35 ರವರೆಗೆ ಶ್ರೀ ಸಿದ್ದು ಹುಣಸೀಮರದ ಕಿರಿಯ ಅಭಿಯಂತರರು ಮೋಬೈಲ್ ಸಂಖ್ಯೆ: 8088782451 ಗಳಿಗೆ ಸಂಪರ್ಕಿಸಿ ನೀರಿನ ಟ್ಯಾಂಕರ್ ಅನ್ನು ಪಡೆಯಲು ಈ ಮೂಲಕ ಕೋರಿದೆ.
ಅಲ್ಲದೇ ಯಾವುದೇ ಬೋರ್ ವೆಲ್ ಗಳು, ಪೈಪ್ ಲೈನ್ ಗಳು ಇತರೆ ದುರಸ್ತಿಗಳು ಬಂದಲ್ಲಿ ಈ ಕಾರ್ಯಕ್ಕೆ ಸಂಬಂಧಪಟ್ಟ ಮೇಲಿನ ಕಿರಿಯ ಅಭಿಯಂತರರನ್ನು ಸಂಪರ್ಕಿಸಲು ಸಾರ್ವಜನಿಕರಲ್ಲಿ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Lalita MP