ಪ್ರೇಕ್ಷಕರ ಮನ ಗೆದ್ದ ಸಿತಾರೆ ಜಮೀನ್ ಪರ್ ಚಿತ್ರ
ಮುಂಬಯಿ, 27 ಜೂನ್ (ಹಿ.ಸ.) : ಆ್ಯಂಕರ್ : ಆಮಿರ್ ಖಾನ್ ಮತ್ತು ಜೆನಿಲಿಯಾ ದೇಶಮುಖ ಅಭಿನಯದ ''ಸಿತಾರೆ ಜಮೀನ್ ಪರ್'' ಚಿತ್ರವು ಬಿಡುಗಡೆಯಾದ ಒಂದೇ ವಾರದಲ್ಲಿ 88.70 ಕೋಟಿ ರೂ. ಗಳಿಸಿ ತನ್ನ 80 ಕೋಟಿ ಬಜೆಟ್ ಮೀರಿದ ಯಶಸ್ಸು ಕಂಡಿದೆ. ಜೂನ್ 20ರಂದು ಬಿಡುಗಡೆಯಾದ ಈ ಚಿತ್ರ ವಿಮರ್ಶಕರಿಂದ ಹಾಗೂ ಪ್ರೇ
Film


ಮುಂಬಯಿ, 27 ಜೂನ್ (ಹಿ.ಸ.) :

ಆ್ಯಂಕರ್ : ಆಮಿರ್ ಖಾನ್ ಮತ್ತು ಜೆನಿಲಿಯಾ ದೇಶಮುಖ ಅಭಿನಯದ 'ಸಿತಾರೆ ಜಮೀನ್ ಪರ್' ಚಿತ್ರವು ಬಿಡುಗಡೆಯಾದ ಒಂದೇ ವಾರದಲ್ಲಿ 88.70 ಕೋಟಿ ರೂ. ಗಳಿಸಿ ತನ್ನ 80 ಕೋಟಿ ಬಜೆಟ್ ಮೀರಿದ ಯಶಸ್ಸು ಕಂಡಿದೆ.

ಜೂನ್ 20ರಂದು ಬಿಡುಗಡೆಯಾದ ಈ ಚಿತ್ರ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಪ್ರತಿ ದಿನವೂ ಸ್ಥಿರವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಗಳಿಕೆ ದಾಖಲಿಸಿದೆ.

ಚಿತ್ರದಲ್ಲಿ ಆಮಿರ್ ಖಾನ್ ವಿವಾದಾತ್ಮಕ ಬ್ಯಾಸ್ಕೆಟ್‌ಬಾಲ್ ತರಬೇತುದಾರನಾಗಿ ‘ಗುಲ್ಶನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜೆನಿಲಿಯಾ ಅವರು ಅವರ ಪತ್ನಿ ಸುನೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ತನ್ನ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಸೇರಿ ನಿರ್ಮಿಸಿದ್ದಾರೆ.

ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಮಕ್ಕಳ ಕುರಿತಾದ ಈ ಚಿತ್ರವು ಫ್ರೆಂಚ್ ಚಲನಚಿತ್ರ ‘ಚಾಂಪಿಯನ್ಸ್’ ನ ಅಧಿಕೃತ ಹಿಂದಿ ರೀಮೇಕ್ ಆಗಿದೆ.

ಈ ವೇಳೆ ಕಾಜೋಲ್ ನಟನೆಯ ಹೊಸ ಥ್ರಿಲ್ಲರ್-ಹಾರರ್ ಚಿತ್ರ ‘ಮಾ’ ಕೂಡ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆಗೆ ನಿಂತಿದ್ದು, ಇಬ್ಬರು ಹಿರಿಯ ತಾರೆಯರ ನಡುವಿನ ಹೋರಾಟ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande