22 Jul 2025, 17:41 HRS IST

ಹುಬ್ಬಳ್ಳಿಯ ಎಸ್.ಆರ್. ಬೊಮ್ಮಾಯಿ‌ ರೋಟರಿ ಶಾಲೆ ರಸ್ತೆ ದುಸ್ಥಿತಿಗೆ ಪೋಷಕರ ಹಿಡಿ ಶಾಪ
ಹುಬ್ಬಳ್ಳಿ, 27 ಜೂನ್ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ‌ನಗರದ ಪ್ರಿಯದರ್ಶಿನಿ ಕಾಲೋನಿಯ ಎಸ್.ಆರ್. ಬೊಮ್ಮಾಯಿ‌ ರೋಟರಿ ಶಾಲೆಗೆ ಹೋಗುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಪೂರ್ಣ ಕೆಸರಿನಲ್ಲಿ ಮುಳುಗಿದ್ದು, ಶಾಲೆಗೆ ನಿತ್ಯ ಪಾದಚಾರಿ ಆಗುವ ಮಕ
School road


ಹುಬ್ಬಳ್ಳಿ, 27 ಜೂನ್ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ‌ನಗರದ ಪ್ರಿಯದರ್ಶಿನಿ ಕಾಲೋನಿಯ ಎಸ್.ಆರ್. ಬೊಮ್ಮಾಯಿ‌ ರೋಟರಿ ಶಾಲೆಗೆ ಹೋಗುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಪೂರ್ಣ ಕೆಸರಿನಲ್ಲಿ ಮುಳುಗಿದ್ದು, ಶಾಲೆಗೆ ನಿತ್ಯ ಪಾದಚಾರಿ ಆಗುವ ಮಕ್ಕಳು ಚಪ್ಪಲಿಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.

ವಿಮಾನ ನಿಲ್ದಾಣದ ಪ್ರಮುಖ ರಸ್ತೆಯಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ‌ ಹೆಸರಿನ ರೋಟರಿ ಶಾಲೆಗೆ ಮಳೆಗಾಲದಲ್ಲಿ ಕಾಲ್ನಡಿಗೆಯಲ್ಲಿ ತೆರಳುವ ಮಕ್ಕಳ ಪರಿಸ್ಥಿತಿ ಹೇಳತೀರದಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ನಗರದಲ್ಲಿ ಹಲವಾರು ಕಾಮಗಾರಿಗಳು ನಡೆಯುತ್ತಿವೆ ಆದರೆ ಶಾಲಾ ಮಕ್ಕಳಿಗೆ ಉತ್ತಮ ರಸ್ತೆ ನಿರ್ಮಿಸಲು ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ.

ಈ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳಿಗೆ ಶಿಕ್ಷಣದ ಹಕ್ಕು ಇದೆ, ಆದರೆ ಅವರು ತಲುಪಬೇಕಾದ ದಾರಿಯೇ ಇಲ್ಲದ ಸ್ಥಿತಿಯಲ್ಲಿದೆ, ಶಾಲಾ ಆಡಳಿತ ಮಂಡಳಿ ಕೂಡ ಈ ಕುರಿತು ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪೋಷಕರು ಮಹಾನಗರ ಪಾಲಿಕೆಗೆ ಸಂಪರ್ಕಿಸಿದರೆ ಇದು ವ್ಯಾಜ್ಯದಲ್ಲಿದೆ, ಅಲ್ಲಿನ ರಸ್ತೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿದ್ದು, ತಾತ್ಕಾಲಿಕ ಕಾಮಗಾರಿ ಕೈಗೊಳ್ಳಲು ಸಾದ್ಯವಿಲ್ಲ ಎಂಬ ಉತ್ತರ ದೊರೆಯುತ್ತಿದೆ.

ಅಧಿಕಾರಿಗಳ ಈ ಉತ್ತರಕ್ಕೆ ಪೋಷಕರು ರೋಸಿ ಹೋಗಿದ್ದು

ವ್ಯಾಜ್ಯ ಇದ್ದರೆ ಮಕ್ಕಳ ಜೀವದ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ರಸ್ತೆ ದುರಸ್ತಿಗೆ ನ್ಯಾಯಾಲಯ ಅಡೆತಡೆಯಾಗಲ್ಲ, ಆದರೆ ಶಾಲಾ ಆಡಳಿತ ಮಂಡಳಿ, ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಉದಾಸೀನ ಮನೋಭಾವದಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ ಎಂದು ಪೋಷಕರಾದ ವೀಣಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಯ ವಿವಾದ ನ್ಯಾಯಾಲಯದಲ್ಲಿದ್ದರೂ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ತಾತ್ಕಾಲಿಕ ದಾರಿ ಪರಿಹಾರ, ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಾಣ ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ಪೋಷಕರು ಅಧಿಕಾರಿಗಳಿಗೆ ಹಾಗೂ ಶಾಲಾ ಆಡಳಿತ ಮಂಡಳಿಗೆ ಒತ್ತಾಯಿಸುತ್ತಿದ್ದಾರೆ. “ಮಕ್ಕಳ ಭವಿಷ್ಯಕ್ಕಾಗಿ ನ್ಯಾಯಾಂಗ ವಿವಾದ ನೆಪವಲ್ಲ” ಎಂಬುದು ಪೋಷಕರ ಅಭಿಪ್ರಾಯವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande