ಟೆಲ್ ಅವಿವ್, 27 ಜೂನ್ (ಹಿ.ಸ.) :
ಆ್ಯಂಕರ್ : ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‌ನ ಹುಲಾ ಹಳ್ಳಿಯಲ್ಲಿ ಹಿಜ್ಬೊಲ್ಲಾ ಬಳಸುತ್ತಿದ್ದ ಅಡಗು ತಾಣದ ಮೇಲೆ ದಾಳಿ ನಡೆಸಿದೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
ಹಿಜ್ಬೊಲ್ಲಾ ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಲೆಬನಾನ್ ಸರ್ಕಾರ ದಾಳಿಯನ್ನು ತೀವ್ರವಾಗಿ ಟೀಕಿಸಿ, ಇಸ್ರೇಲ್ ಶಾಂತಿಗೆ ಬೆದರಿಕೆ ಉಂಟು ಮಾಡುತ್ತಿದೆ ಎಂದು ಹೇಳಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa