ಬ್ರಿಡ್ಜ್‌ಟೌನ್, 26 ಜೂನ್ (ಹಿ.ಸ.) :
ಆ್ಯಂಕರ್ : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೇವಲ 180 ರನ್‌ಗಳಿಗೆ ಆಲೌಟ್ ಆಯಿತು. ವೇಗದ ಬೌಲರ್‌ಗಳು ಜೇಡನ್ ಸೀಲ್ಸ್ (5/60) ಮತ್ತು ಶಮರ್ ಜೋಸೆಫ್ (4/46) ಮಾರಕ ಬೌಲಿಂಗ್ ದಾಳಿ ನಡೆಸಿದರು.
ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿದ್ದು 57/4 ರನ್‌ಗಳಿಗೆ ತೃಪ್ತಿಪಟ್ಟಿದೆ. ಬ್ರಾಂಡನ್ ಕಿಂಗ್ 23 ರನ್ ಗಳೊಂದಿಗೆ ಕ್ರೀಸ್‌ನಲ್ಲಿ ಉಳಿದಿದ್ದಾರೆ.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 59 ಮತ್ತು ಖವಾಜ 47 ರನ್ ಗಳಿಸಿದರು. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಹ್ಯಾಜಲ್ವುಡ್ ತಲಾ ಒಂದು ವಿಕೆಟ್ ಪಡೆದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa