ನವದೆಹಲಿ, 25 ಜೂನ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ಪರಿಣಾಮವಾಗಿ ಜಾಗತಿಕ ಉದ್ವಿಗ್ನತೆ ಕಡಿಮೆಯಾಗಿದ್ದು, ಭಾರತೀಯ ಷೇರು ಮಾರುಕಟ್ಟೆ ಬುಧವಾರ ಹಸಿರು ಗುರುತುಗಳೊಂದಿಗೆ ವಹಿವಾಟು ಪ್ರಾರಂಭಿಸಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ಸೂಚ್ಯಂಕಗಳು ಭಾರಿ ಏರಿಕೆಯನ್ನು ದಾಖಲಿಸಿವೆ.
ಬಾಂಬೆ ಷೇರು ವಿನಿಮಯ ಕೇಂದ್ರದ ಸೆನ್ಸೆಕ್ಸ್ ಪ್ರಾರಂಭಿಕ ವಹಿವಾಟಿನಲ್ಲಿ 601.29 ಅಂಕಗಳ (ಅಂದರೆ ಶೇಕಡಾ 0.73) ಏರಿಕೆಯಾಗಿದ್ದು, 82,656.40 ಮಟ್ಟವನ್ನು ತಲುಪಿದೆ. ಇತ್ತ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ನಿಫ್ಟಿ ಕೂಡಾ 166.00 ಅಂಕಗಳು (ಶೇಕಡಾ 0.66) ಏರಿಕೆಯಾಗಿದ್ದು, 25,210.35 ಅಂಕಗಳಿಗೆ ತಲುಪಿದೆ.
ಸೆನ್ಸೆಕ್ಸ್‌ನ 30 ಪ್ರಮುಖ ಷೇರುಗಳಲ್ಲಿ 29 ಷೇರುಗಳು ಲಾಭದತ್ತ ಸಾಗಿವೆ. ಅದಾನಿ ಪೋರ್ಟ್ಸ್, ಪವರ್ ಗ್ರಿಡ್ ಮತ್ತು ಎಚ್ ಯುಎಲ್ ನಲ್ಲಿ ಒಂದು ಶೇಕಡಾ ಮಟ್ಟದ ಏರಿಕೆ ಕಂಡುಬಂದಿದೆ. ಕೆಲವೊಂದು ಷೇರುಗಳು ಮಾತ್ರ ಕುಸಿತ ಕಂಡಿದ್ದು, ಏಷ್ಯನ್ ಪೇಂಟ್ಸ್ ಸ್ವಲ್ಪ ಹಿನ್ನಡೆಯಾಗಿದೆ.
ಇನ್ನು ನಿಫ್ಟಿಯ 50 ಷೇರುಗಳಲ್ಲಿ 46 ಷೇರುಗಳು ಲಾಭದತ್ತ ಸಾಗಿವೆ. ಐಟಿ, ಆಟೋ ಮತ್ತು ರಿಯಾಲ್ಟಿ ಸೇರಿದಂತೆ ಎಲ್ಲಾ ವಲಯಗಳು ಇಳಿಕೆಯಾಗದೆ ಏರಿಕೆಯ ವಹಿವಾಟು ನಡೆಸುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa