ಗದಗ, 25 ಜೂನ್ (ಹಿ.ಸ.) :
ಆ್ಯಂಕರ್ : ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ನಿನ್ನೆ ಲೋಕಾಯುಕ್ತ ಪೊಲೀಸರು ಗದಗ ಶಹರ ಪೊಲೀಸ್ ಠಾಣೆಯ ಸಿಪಿಐಗೆ ಶಾಕ್ ಕೊಟ್ಟಿದ್ದಾರೆ.
ಗದಗ ಶಹರ ಠಾಣೆ ಸಿಪಿಐ ಡಿ.ಬಿ. ಪಾಟೀಲ ಲೋಕಾ ಬಲೆಗೆ ಬಿದ್ದಿದ್ದು, ಶಹರ ಪೊಲೀಸ್ ಠಾಣೆ, ಶಿವಾನಂದ ನಗರದಲ್ಲಿರುವ ಮನೆ ಹಾಗೂ ಸಿಪಿಐ ಡಿ.ಬಿ ಪಾಟೀಲ ಆವರಿಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರಿನ ಮನೆ ಸೇರಿ 8 ಕಡೆಗಳಲ್ಲಿ ದಾಳಿ ನಡೆದಿದೆ.
ಲೋಕಾಯುಕ್ತ ದಾಳಿ ವೇಳೆ 4 ನಿವೇಶನಗಳು, 1 ವಾಸದ ಮನೆ, ಎಲ್ಲಾ ಸೇರಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1,00,00,000 ರೂ., 4,89,618 ರೂ. ನಗದು, 27,07,176 ರೂ. ಬೆಲೆ ಬಾಳುವ ಚಿನ್ನಾಭರಣಗಳು, 10,00,000 ರೂ. ಬೆಲೆಬಾಳುವ ವಾಹನಗಳು, 7,00,000 ರೂ. ಬೆಲೆಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಸೇರಿ ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 48,96,794 ರೂ. ಸೇರಿ ಒಟು 1,48,96,794 ರೂ. ಆಸ್ತಿ ಮೌಲ್ಯ ಪತ್ತೆಯಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ.ಎಸ್ ಪಾಟೀಲ, ಸಿಪಿಐ ಪರಶುರಾಮ್ ಕವಟಗಿ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಅನೇಕ ದಾಖಲೆಗಳು ಕಡತಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP