ಟ್ರಂಪ್ ಹೇಳಿಕೆಗೆ ಇರಾನ್‌ನ ತೀವ್ರ ಪ್ರತಿಕ್ರಿಯೆ : ಪರಮಾಣು ಕಾರ್ಯಕ್ರಮ ನಿಲ್ಲುವುದಿಲ್ಲ
ಟೆಹ್ರಾನ್, 25 ಜೂನ್ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಇರಾನ್, ತನ್ನ ಪರಮಾಣು ಕಾರ್ಯಕ್ರಮವನ್ನು ಯಾವುದೇ ಒತ್ತಡಕ್ಕೂ ನಿಲ್ಲಿಸುವುದಿಲ್ಲ ಎಂದು ಘೋಷಿಸಿದೆ. ಇರಾನ್ ಪರಮಾಣು ಶಕ್ತಿ ಸಂಸ್ಥೆ ಯುರೇನಿಯಂ ಪುಷ್ಟೀಕರಣ ಪುನರಾರಂಭಕ್
ಟ್ರಂಪ್ ಹೇಳಿಕೆಗೆ ಇರಾನ್‌ನ ತೀವ್ರ ಪ್ರತಿಕ್ರಿಯೆ : ಪರಮಾಣು ಕಾರ್ಯಕ್ರಮ ನಿಲ್ಲುವುದಿಲ್ಲ


ಟೆಹ್ರಾನ್, 25 ಜೂನ್ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಇರಾನ್, ತನ್ನ ಪರಮಾಣು ಕಾರ್ಯಕ್ರಮವನ್ನು ಯಾವುದೇ ಒತ್ತಡಕ್ಕೂ ನಿಲ್ಲಿಸುವುದಿಲ್ಲ ಎಂದು ಘೋಷಿಸಿದೆ. ಇರಾನ್ ಪರಮಾಣು ಶಕ್ತಿ ಸಂಸ್ಥೆ ಯುರೇನಿಯಂ ಪುಷ್ಟೀಕರಣ ಪುನರಾರಂಭಕ್ಕೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದೆ.

ಈ ಚಟುವಟಿಕೆಗಳು ಸಂಪೂರ್ಣ ಶಾಂತಿಯುತ ಉದ್ದೇಶಗಳಿಗೆ ಆಗಿದ್ದು, ಅಂತಾರಾಷ್ಟ್ರೀಯ ಮಾರ್ಗಸೂಚಿಗಳಡಿ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಟ್ರಂಪ್ ಅವರು ಇರಾನ್‌ ಪರಮಾಣು ಬಾಂಬ್‌ ಸಾಧ್ಯತೆಯನ್ನು ನಿಷ್ಕ್ರಿಯಗೊಳಿಸಿದ್ದಾಗಿ ಹೇಳಿಕೆ ನೀಡಿದ್ದರಿಂದ ಈ ಪ್ರತಿಕ್ರಿಯೆ ಬಂದಿದೆ.

ಇದರ ಜೊತೆಗೆ, ಇಸ್ರೇಲ್-ಇರಾನ್ ನಡುವಿನ ಕದನ ವಿರಾಮವನ್ನು ಟ್ರಂಪ್ ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದರೆ, ಇರಾನ್ ಅದನ್ನು ಅಮೆರಿಕದ ಪ್ರಚಾರದ ಭಾಗ ಎಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande