ಭಾರತದ ಗಗನಯಾನದಲ್ಲಿ ಐತಿಹಾಸಿಕ ಕ್ಷಣ : ಶುಭಾಂಶು ಶುಕ್ಲಾ ಐಎಸ್ಎಸ್‌ಗೆ ಪಯಣ
ನವದೆಹಲಿ, 25 ಜೂನ್ (ಹಿ.ಸ.) : ಆ್ಯಂಕರ್ : ಭಾರತದ ಬಾಹ್ಯಾಕಾಶ ಸಾಧನೆಗೆ ಮತ್ತೊಂದು ಗರಿ ಇದೀಗ ಸೇರಿಕೊಂಡಿದೆ. ಭಾರತೀಯ ವಾಯುಪಡೆದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿರುವ ಭಾರತದ ಎರಡನೇ ಗಗನಯಾತ್ರಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಆಕ್ಸಿಯಮ್
Axiom


ನವದೆಹಲಿ, 25 ಜೂನ್ (ಹಿ.ಸ.) :

ಆ್ಯಂಕರ್ : ಭಾರತದ ಬಾಹ್ಯಾಕಾಶ ಸಾಧನೆಗೆ ಮತ್ತೊಂದು ಗರಿ ಇದೀಗ ಸೇರಿಕೊಂಡಿದೆ. ಭಾರತೀಯ ವಾಯುಪಡೆದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿರುವ ಭಾರತದ ಎರಡನೇ ಗಗನಯಾತ್ರಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ಆಕ್ಸಿಯಮ್ 4 ಮಿಷನ್ ತಂಡದೊಂದಿಗೆ, ಶುಕ್ಲಾ ಅವರು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ ಫಾಲ್ಕನ್-9 ರಾಕೆಟ್ ಮೂಲಕ ಬುಧವಾರ ಮಧ್ಯಾಹ್ನ 12:01 ಕ್ಕೆ ಐಎಸ್ಎಸ್‌ನತ್ತ ಹೊರಟಿದ್ದಾರೆ. ಈ ಮಿಷನ್‌ನಲ್ಲಿ ಇನ್ನೂ ಮೂವರು ಅಂತಾರಾಷ್ಟ್ರೀಯ ಗಗನಯಾತ್ರಿಗಳು ಸೇರಿದ್ದಾರೆ.

ಹಲವಾರು ತಾಂತ್ರಿಕ ತೊಂದರೆಗಳಿಂದ ಈ ಮಿಷನ್ ಹಲವು ಬಾರಿ ಮುಂದೂಡಲ್ಪಟ್ಟಿತ್ತು, ಎಲ್ಲಾ ದೋಷಗಳನ್ನು ಸರಿಪಡಿಸಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ನಾಸಾ ಹಾಗೂ ಸ್ಪೇಸ್ಎಕ್ಸ್ ತಿಳಿಸಿವೆ.

1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರ ಬಾಹ್ಯಾಕಾಶ ಪಯಣದ ಬಳಿಕ, ಇದೇ ಮೊದಲ ಬಾರಿಗೆ ಭಾರತದ ಮತ್ತೊಬ್ಬ ವ್ಯಕ್ತಿ ಬಾಹ್ಯಾಕಾಶಕ್ಕೆ ಪಯಣ ಮಾಡುತ್ತಿರುವುದು ರಾಷ್ಟ್ರದ ಬಾಹ್ಯಾಕಾಶ ಉನ್ನತಿಯತ್ತ ಮುನ್ನಡೆದ ಹೆಜ್ಜೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande