ಮಹಿಳಾ ಕೆರಿಬಿಯನ್ ಲೀಗ್‌ 2025 : ಶ್ರೇಯಾಂಕಾ ಪಾಟೀಲ್, ಶಿಖಾ ಪಾಂಡೆ ಮರುಪ್ರವೇಶ
ನವದೆಹಲಿ, 24 ಜೂನ್ (ಹಿ.ಸ.) : ಆ್ಯಂಕರ್ : ಭಾರತದ ಶ್ರೇಯಾಂಕಾ ಪಾಟೀಲ್ ಮತ್ತು ಶಿಖಾ ಪಾಂಡೆ ಅವರು ಸೆಪ್ಟೆಂಬರ್ 6ರಿಂದ ಆರಂಭವಾಗುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಮತ್ತೊಮ್ಮೆ ಪಾಲ್ಗೊಳ್ಳುತ್ತಿದ್ದಾರೆ. ಕೈ ಮೂಳೆ ಮುರಿತದಿಂದ ಚೇತರಿಸಿಕೊಂಡ ಶ್ರೇಯಾಂಕಾ, ಬಾರ್ಬಡೋಸ್ ರಾಯಲ್ಸ್ ತಂಡವನ್ನ
Wpl


ನವದೆಹಲಿ, 24 ಜೂನ್ (ಹಿ.ಸ.) :

ಆ್ಯಂಕರ್ : ಭಾರತದ ಶ್ರೇಯಾಂಕಾ ಪಾಟೀಲ್ ಮತ್ತು ಶಿಖಾ ಪಾಂಡೆ ಅವರು ಸೆಪ್ಟೆಂಬರ್ 6ರಿಂದ ಆರಂಭವಾಗುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಮತ್ತೊಮ್ಮೆ ಪಾಲ್ಗೊಳ್ಳುತ್ತಿದ್ದಾರೆ.

ಕೈ ಮೂಳೆ ಮುರಿತದಿಂದ ಚೇತರಿಸಿಕೊಂಡ ಶ್ರೇಯಾಂಕಾ, ಬಾರ್ಬಡೋಸ್ ರಾಯಲ್ಸ್ ತಂಡವನ್ನು ಸೇರಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಟವಾಡಿದ್ದ. ಶಿಖಾ ಪಾಂಡೆ ಅವರನ್ನು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಬರಮಾಡಿಕೊಂಡಿದೆ.

ಟೂರ್ನಿಯ ಫೈನಲ್ ಸೆಪ್ಟೆಂಬರ್ 17ರಂದು ಗಯಾನಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂವರು ನಾಯಕಿಯರು—ಹೇಲಿ ಮ್ಯಾಥ್ಯೂಸ್ (ರಾಯಲ್ಸ್), ಡಾಟಿನ್ (ಟಿಕೆಆರ್), ಟೇಲರ್ (ಗಯಾನಾ)—ತಂಡಗಳನ್ನು ಮುನ್ನಡೆಸಲಿದ್ದಾರೆ.

ಮೂರು ತಂಡಗಳು ಡಬಲ್ ರೌಂಡ್-ರಾಬಿನ್ ಮಾದರಿಯಲ್ಲಿ ಪಂದ್ಯ ಆಡಲಿದ್ದು, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande