ಟ್ರಂಪ್ ಯುದ್ಧ ವಿರಾಮ ಘೋಷಣೆ ಹಿನ್ನೆಲೆ ಷೇರು ಮಾರುಕಟ್ಟೆ ಏರಿಕೆ
ನವದೆಹಲಿ, 24 ಜೂನ್ (ಹಿ.ಸ.) : ಆ್ಯಂಕರ್ : ಇರಾನ್-ಇಸ್ರೇಲ್ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕದನ ವಿರಾಮದ ಪರಿಣಾಮವಾಗಿ ದೇಶೀಯ ಷೇರು ಮಾರುಕಟ್ಟೆ ಮಂಗಳವಾರದ ವಹಿವಾಟಿನಲ್ಲಿ ಲಾಭದಾಯಕವಾಗಿ ಪ್ರಾರಂಭವಾಯಿತು. ಬಿಎಸ್ಇ ಸೆನ್ಸೆಕ್ಸ್ 637 ಅಂಕ ಏರಿಕೆಯಿಂದ 82,534 ಅಂಕಗಳಲ್ಲಿ ತೆರೆದು,
Stock market


ನವದೆಹಲಿ, 24 ಜೂನ್ (ಹಿ.ಸ.) :

ಆ್ಯಂಕರ್ : ಇರಾನ್-ಇಸ್ರೇಲ್ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕದನ ವಿರಾಮದ ಪರಿಣಾಮವಾಗಿ ದೇಶೀಯ ಷೇರು ಮಾರುಕಟ್ಟೆ ಮಂಗಳವಾರದ ವಹಿವಾಟಿನಲ್ಲಿ ಲಾಭದಾಯಕವಾಗಿ ಪ್ರಾರಂಭವಾಯಿತು.

ಬಿಎಸ್ಇ ಸೆನ್ಸೆಕ್ಸ್ 637 ಅಂಕ ಏರಿಕೆಯಿಂದ 82,534 ಅಂಕಗಳಲ್ಲಿ ತೆರೆದು, ಏರಿಳಿತದ ನಡುವೆಯೂ ಬೆಳಿಗ್ಗೆ 10:15ಕ್ಕೆ 869 ಅಂಕಗಳ ಲಾಭದೊಂದಿಗೆ 82,766 ಅಂಕಗಳನ್ನು ತಲುಪಿತು. ಎನ್ಎಸ್ಇ ನಿಫ್ಟಿಯೂ 265 ಅಂಕಗಳ ಏರಿಕೆಯಿಂದ 25,237 ಅಂಕಗಳಲ್ಲಿ ವಹಿವಾಟು ನಡೆಸಿತು.

ಅದಾನಿ ಪೋರ್ಟ್ಸ್, ಲಾರ್ಸೆನ್ ಮತ್ತು ಟೂಬ್ರೊ, ಜಿಯೋ ಫೈನಾನ್ಷಿಯಲ್ ಮುಂತಾದ ಷೇರುಗಳು 4% ವರೆಗೆ ಏರಿಕೆ ಕಂಡರೆ, ಎನ್‌ಟಿಪಿಸಿ, ಓಎನ್‌ಜಿಸಿ ಷೇರುಗಳು ಸುಮಾರು 2.9% ರಷ್ಟು ಕುಸಿತ ಕಂಡವು.

ಒಟ್ಟು 2,466 ಷೇರುಗಳಲ್ಲಿ 2,025 ಲಾಭದಲ್ಲಿ, 441 ನಷ್ಟದಲ್ಲಿ ವಹಿವಾಟು ನಡೆಸಿದವು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande