ನಾಳೆ ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ, 24 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪವಿಭಾಗ ವ್ಯಾಪ್ತಿಗೆ ಬರುವ ವಿದ್ಯುತ್ ಉಪ-ಕೇಂದ್ರದ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುರಿಂದ ಮೋಕಾ ವಿದ್ಯುತ್ ಉಪ-ಕೇಂದ್ರ ಮತ್ತು 33/11ಕೆ.ವಿ ರ‍್ರಗುಡಿ ವಿದ್ಯುತ್ ಉಪಕೇಂದ್ರದಿ0ದ ಸರಬರಾಜು ಆಗುವ ಮಾ
ನಾಳೆ ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ಬಳ್ಳಾರಿ, 24 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪವಿಭಾಗ ವ್ಯಾಪ್ತಿಗೆ ಬರುವ ವಿದ್ಯುತ್ ಉಪ-ಕೇಂದ್ರದ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುರಿಂದ ಮೋಕಾ ವಿದ್ಯುತ್ ಉಪ-ಕೇಂದ್ರ ಮತ್ತು 33/11ಕೆ.ವಿ ರ‍್ರಗುಡಿ ವಿದ್ಯುತ್ ಉಪಕೇಂದ್ರದಿ0ದ ಸರಬರಾಜು ಆಗುವ ಮಾರ್ಗಗಳಲ್ಲಿ ನಾಳೆ ಬೆಳಿಗ್ಗೆ 11 ಗಂಟೆಯಿ0ದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿದ್ದಾರೆ.

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*

ಎಫ್-01 ಬಿ.ಡಿ.ಹಳ್ಳಿ ಐಪಿ ಮಾರ್ಗದ ಮೋಕಾ ಬಿ.ಡಿ.ಹಳ್ಳಿ ಕೃಷಿ ಪ್ರದೇಶಗಳು. ಎಫ್-02 ಮಸೀದಿಪುರ ಐಪಿ ಮಾರ್ಗದ ಗೋಟೂರು, ಕೆ.ಕೆಹಾಳ್, ಮಸೀದಿಪುರ, ವಣೆನೂರು, ಬಾಣಾಪುರ, ಗುಡುದೂರು ಕೃಷಿ ಪ್ರದೇಶಗಳು. ಎಫ್-04 ಮೋಕಾ/ ಶಿವಪುರ ಐಪಿ ಮಾರ್ಗದ ಶಿವಪುರ, ಅಶೋಕನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ, ಸಂಗನಕಲ್ಲು, ಚಾಗನೂರು ಕೃಷಿ ಪ್ರದೇಶಗಳು.

ಎಫ್-05 ವಾಟರ್ ವರ್ಕ್ಸ್ ಶಿವಪುರ ವಾಟರ್ ವರ್ಕ್ಸ್. ಎಫ್-12 ಬಸರಕೋಡು ಎನ್.ಜೆ.ವೈ ಮಾರ್ಗದ ಗೋಟೂರು, ಕೆ.ಕೆಹಾಳ್, ಮಸೀದಿಪುರ, ವಣೆನೂರು, ಕರ್ಚೇಡು, ಬಸರಕೋಡು, ಬಾಣಾಪುರ ಹೀರೆಹಡ್ಲಿಗಿ ಗ್ರಾಮಗಳು. ಎಫ್-13 ಬಸರಕೋಡು ಐಪಿ ಮಾರ್ಗದ ಮೋಕಾ, ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಕೃಷಿ ಪ್ರದೇಶಗಳು.

ಎಫ್-14 ಕಪ್ಪಗಲ್ಲು ಮತ್ತು ಸೋಲಾರ್ ಮಾರ್ಗದ ಶಿವಪುರ, ಅಶೋಕ ನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ ಗ್ರಾಮ. ಎಫ್-15 ಮೋಕಾ ಮತ್ತು ಸೋಲಾರ್ ಮಾರ್ಗದ ಮೋಕಾ ಮತ್ತು ಬಿ.ಡಿ.ಹಳ್ಳಿ ಗ್ರಾಮ. ಎಫ್-01 ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಳ್ಳಿ, ಬ್ಯಾಲಚಿಂತೆ ಕೃಷಿ ಪ್ರದೇಶಗಳು.

ಎಫ್-02 ಜಿ.ಎನ್ ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಳ್ಳಿ, ಬ್ಯಾಳಚಿಂತೆ ಕೃಷಿ ಪ್ರದೇಶಗಳು. ಎಫ್-03 ಹಳೆ ರ‍್ರಗುಡಿ ಐಪಿ ಮಾರ್ಗದ ಹಳೆ ಯ್ರ‍್ರಗುಡಿ, ಹೊಸ ರ‍್ರಗುಡಿ, ಸಿಂಧುವಾಳ, ಬೆಣಕಲ್ಲು ಕೃಷಿ ಪ್ರದೇಶಗಳು. ಎಫ್-04 ವೇದಾವತಿ ಐಪಿ ಮಾರ್ಗದ ಡಿ.ಎನ್ ಹಳ್ಳಿ, ಮೋಕಾ ಕೃಷಿ ಪ್ರದೇಶಗಳು.

ಎಫ್-05 ಸಿಂಧುವಾಳ ಸೋಲಾರ್ ಮಾರ್ಗದ ಹಳೆ ಯ್ರ‍್ರಗುಡಿ, ಹೊಸ ರ‍್ರಗುಡಿ, ಸಿಂಧುವಾಳ, ಬೆಣಕಲ್ಲು, ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮ. ಎಫ್-06 ಜಾಲಿಹಾಳ್ ಐಪಿ ಮಾರ್ಗದ ಎಂ.ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಕೃಷಿ ಪ್ರದೇಶಗಳು. 33ಕೆ.ವಿ ಮಾರ್ಗದ 33ಕೆ.ವಿ ಎನ್.ಡಿ.ಪಿ.ಎಲ್ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲಾ ಕೃಷಿ ಮಾರ್ಗಗಳಲ್ಲಿ ಜೂ.26 ರಂದು ಬೆಳಿಗ್ಗೆ 04 ಗಂಟೆಯಿ0ದ ಬೆಳಿಗ್ಗೆ 11 ಗಂಟೆಯವರೆಗೆ ವಿದ್ಯುತ್ ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande