ಗದಗ, 24 ಜೂನ್ (ಹಿ.ಸ.) :
ಆ್ಯಂಕರ್ : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದರ ಆರೋಪದ ಮೇಲೆ ಗದಗ ಶಹರ ಪೊಲೀಸ್ ಠಾಣೆಯ ಸಿಪಿಐ ಡಿ. ಬಿ. ಪಾಟೀಲ್ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದರು.
ಗದಗನ ಶಿವಾನಂದ ನಗರದಲ್ಲಿರುವ ಬಾಡಿಗೆ ಮನೆ ಹಾಗೂ ಕಚೇರಿಯಲ್ಲಿ ಆರಂಭಿಸಿದ ಅಧಿಕಾರಿಗಳು, ನಂತರ ಪಾಟೀಲ್ ಅವರಿಗೆ ಸೇರಿದ ಬಾಗಲಕೋಟೆ, ಜಮಖಂಡಿ ಮತ್ತು ಕೆರೂರಿನ ನಿವಾಸಗಳ ಮೇಲೆಯೂ ದಾಳಿ ನಡೆಸಿದ್ದಾರೆ.
ಡಿವೈಎಸ್ಪಿ ಪುಷ್ಪಲತಾ, ಪಿ. ಎಸ್. ಪಾಟೀಲ್, ಸಿಪಿಐ ಪರಶುರಾಮ ಕವಟಗಿ ನೇತೃತ್ವದ ತಂಡ ಇಂಚಿಂಚು ಪರಿಶೀಲನೆ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮನೆಯ ಆಂತರಿಕ ಕೋಣೆಗಳೊಂದಿಗೇ ಬ್ಯಾಂಕ್ ಖಾತೆ, ದಾಖಲೆ ಪತ್ರಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP