ಬಳ್ಳಾರಿ, 24 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ವತಿಯಿಂದ ಕಸ ಸಂಗ್ರಹಿಸುವ ಮತ್ತು ಕಸ ವಿಲೇವಾರಿ ಮಾಡುವ 23 ನೂತನ ವಾಹನಗಳನ್ನು ಶಾಸಕ ನಾರಾ ಭರತರೆಡ್ಡಿ ಅವರು ಮಂಗಳವಾರ ಲೋಕಾರ್ಪಣೆ ಮಾಡಿದ್ದಾರೆ.
ಬಳ್ಳಾರಿಯ ನಲ್ಲಚೆರುವು ಪ್ರದೇಶದ ಕಸ ಸಂಗ್ರಹ ಘಟಕದ ಆವರಣದಲ್ಲಿ ನಡೆದ ವಾಹನಗಳ ಲೋಕಾರ್ಪಣೆಯಲ್ಲಿ ಅವರು ಪಾಲ್ಗೊಂಡು, ನೂತನ ವಾಹನಗಳನ್ನು ಲೋಕಾರ್ಪಣೆ ಮಾಡಿದರು.
ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ. ಕುಸುಂ, ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾರ್ಪೊರೇಟರುಗಳಾದ ಎಂ. ಪ್ರಭಂಜನಕುಮಾರ್, ಪಿ. ಗಾದೆಪ್ಪ, ಕುಬೇರಾ, ಮಿಂಚು ಸೀನಾ, ನೂರ್ ಮೊಹಮ್ಮದ್, ಪದ್ಮರೋಜ, ಟಿ. ನಾಜು, ಕಾಂಗ್ರೆಸ್ ಮುಖಂಡರಾದ ಅಯಾಜ್ ಅಹ್ಮದ್, ಸುಬ್ಬರಾಯುಡು, ಚಂಪಾ ಚವ್ಹಾಣ್ ಸೇರಿ ಈ ಸಂದರ್ಭದಲ್ಲಿದ್ದರು.
ವಿವಿಧ ಕಾಮಗಾರಿಗಳಿಗೆ ಚಾಲನೆ
ಮಂಗಳವಾರ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‍ಗಳಲ್ಲಿ ನಡೆದ ಭೂಮಿ ಪೂಜೆಗಳಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರು ಭಾಗವಹಿಸಿದರು.
ವಾರ್ಡ್ ಸಂಖ್ಯೆ 3ರ ವ್ಯಾಪ್ತಿಯ ಬಂಡಿಮೋಟ್ ಮಸೀದಿ ಹಿಂಭಾಗ ಅಂದಾಜು ವೆಚ್ಚ 63 ಲಕ್ಷ 50 ಸಾವಿರ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ವಾರ್ಡ್ ಸಂಖ್ಯೆ 13ರ ಮಿಲ್ಲರ್ ಪೇಟೆಯಲ್ಲಿ ಅಂದಾಜು ವೆಚ್ಚ 50 ಲಕ್ಷ ರೂ.ಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ವಾರ್ಡ್ ಸಂಖ್ಯೆ 17ರ ವಿಶಾಲನಗರ - ಹನುಮಾನ ನಗರದಲ್ಲಿ ಅಂದಾಜು ವೆಚ್ಚ 31 ಲಕ್ಷ 83 ಸಾವಿರ ರೂ.ಗಳ ವೆಚ್ಚದಲ್ಲಿ ಕಾಮಗಾರಿಗೆ, ಅಂಜಿನಪ್ಪ ನಗರ ಹಾಗೂ ಬಿ.ಗೋನಾಳ್ ಗ್ರಾಮದ ಅಂಗನವಾಡಿ ನಿರ್ಮಾಣ ಕಾಮಗಾರಿಗಳಿಗೆ (ಅನುಕ್ರಮವಾಗಿ ಅಂದಾಜು 40 ಲಕ್ಷ ರೂ.ಗಳು, 20 ಲಕ್ಷ ರೂ.ಗಳ ವೆಚ್ಚ) ಚಾಲನೆ ನೀಡಲಾಯಿತು.
ಮಾಜಿ ಮೇಯರ್, ಪಾಲಿಕೆಯ ಸದಸ್ಯ ಸಿ. ಇಬ್ರಾಹಿಂಬಾಬು, ಕಾಂಗ್ರೆಸ್ಸಿನ ಕಣೇಕಲ್ ಮೆಹಬೂಬಸಾಬ, ಥಿಯೇಟರ್ ಶಿವು, ರಾಕಿ, ರಘು ಮೊದಲಾದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್