ಇಂಫಾಲ್, 23 ಜೂನ್ (ಹಿ.ಸ.) :
ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿರಿಬಾಮ್‌ನ ಮಖಾಬಸ್ತಿಯಲ್ಲಿ ನಡೆದ ಶೋಧದಲ್ಲಿ ಕಾರ್ಬೈನ್‌ಗಳು, ಮತ್ತು ರೈಫಲ್‌ಗಳು, ದೇಶೀಯ ಬಂದೂಕುಗಳು, ಗ್ರೆನೇಡ್‌ಗಳು ಹಾಗೂ 220ಕ್ಕೂ ಹೆಚ್ಚು ಕಾರ್ಟ್ರಿಡ್ಜ್‌ಗಳು ಪತ್ತೆಯಾದವು. ಪಿಕೆ ಜೆಲಾಟಿನ್, ಕಾರ್ಡೆಕ್ಸ್ ವೈರ್, ಖಾಲಿ ಪಂಪಿ ಬಾಂಬ್‌ಗಳಂತಹ ಸ್ಫೋಟಕ ಸಾಮಗ್ರಿಗಳೂ ಸಿಕ್ಕಿವೆ.
ಜೂನ್ 22ರಂದು ಇಂಫಾಲ್ ಪೂರ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ನಿಷೇಧಿತ ಪ್ರೆಪಕ್ (ಪ್ರೋ) ಸಂಘಟನೆಯ ನಾಲ್ವರು ಸದಸ್ಯರನ್ನು ಬಂಧಿಸಲಾಗಿದ್ದು, ಅವರ ಮಾಹಿತಿ ಆಧಾರವಾಗಿ ಕಾಳಿಕಾ ಬೆಟ್ಟಗಳಲ್ಲಿ ಅಡಗಿಸಿಟ್ಟಿದ್ದ ಹೆಚ್ಚಿನ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಇನ್ನು, ಇಂಫಾಲ್ ಪಶ್ಚಿಮದಿಂದ ಪೀಪಲ್ಸ್ ಲಿಬರೇಶನ್ ಆರ್ಮಿಯ ಸದಸ್ಯ ಸನಸಂ ರಾಜೇಶ್ ಮೈಟೈನನ್ನು ಬಂಧಿಸಲಾಗಿದೆ. ಈತ ಶಾಲೆಗಳು ಹಾಗೂ ಆಸ್ಪತ್ರೆಗಳಿಂದ ಹಣ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa