ಲೀಡ್ಸ್, 23 ಜೂನ್ (ಹಿ.ಸ.) :
ಆ್ಯಂಕರ್ : ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟ ರೋಮಾಂಚಕ ತಿರುವು ಪಡೆದುಕೊಂಡಿದ್ದು, ಪಂದ್ಯ ನಿರ್ಣಾಯಕ ಹಂತ ಪ್ರವೇಶಿಸಿದೆ. ಜಸ್ಪ್ರೀತ್ ಬುಮ್ರಾ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ 465 ರನ್‌ಗಳಿಗೆ ಆಲೌಟ್ ಆಗಿದ್ದು, ನಂತರ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿ 96 ರನ್‌ಗಳ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್‍ಗೆ ಓಲಿ ಪೋಪ್ (106) ಮತ್ತು ಹ್ಯಾರಿ ಬ್ರೂಕ್ (99) ಭರ್ಜರಿ ಆಟ ನೀಡಿದರೆ, ಭಾರತ ಬೌಲಿಂಗ್ ವಿಭಾಗದಲ್ಲಿ ಬುಮ್ರಾ (5/78), ಪ್ರಸಿದ್ಧ್ ಕೃಷ್ಣ (3/95) ಹಾಗೂ ಸಿರಾಜ್ (2/60) ಅವರು ಲಯಬದ್ಧ ದಾಳಿ ನಡೆಸಿದರು.
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ, ಯಶಸ್ವಿ ಜೈಸ್ವಾಲ್ ಬೇಗನೆ ಔಟ್ ಆದರೂ, ಕೆಎಲ್ ರಾಹುಲ್ (ಅಜೇಯ 47) ಮತ್ತು ಸಾಯಿ ಸುದರ್ಶನ್ (30) ಜೊತೆಯಾಟ ತಂಡಕ್ಕೆ ಸ್ಥಿರತೆ ನೀಡಿತು. ಸುದರ್ಶನ್ ಬೆನ್ ಸ್ಟೋಕ್ಸ್‌ನ ಚತುರತೆಯ ಬಲಿಯಾಗಿ ಔಟಾದರು. ದಿನಾಂತ್ಯಕ್ಕೆ ರಾಹುಲ್ ಜೊತೆಗೆ ನಾಯಕ ಶುಭಮನ್ ಗಿಲ್ (6) ಕ್ರೀಸ್‌ನಲ್ಲಿ ಇದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa