ಕೋಲಾರ, ೨೩ ಜೂನ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಗಳ ಮೌಲ್ಯದ ೨ ಕೆಜಿ ೧೦೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಮೆಲ್ನಗರ ಪೊಲೀಸ್ ಠಾಣಾ ಸರಹದ್ದು, ಅಜ್ಜಪ್ಪನಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಮೋರಿಯ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ, ಸೈಬರ್ ಅಪರಾಧ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿನಾರಾಯಣ ಮತ್ತು ಸಿಬ್ಬಂದಿ ಕೂಡಲೇ ದಾಳಿ ನಡೆಸಿ, ಬಂಗಾರಪೇಟೆ ತಾಲ್ಲೂಕು ದೊಡ್ಡವಲಗಮಾದಿ ಗ್ರಾಮದ ವಾಸಿ ಶಶಿಕುಮಾರ್ ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು ರೂ.೧,೭೦,೦೦೦/- ಮೌಲ್ಯದ ೨ ಕೆಜಿ ೧೦೦ ಗ್ರಾಂ ಗಾಂಜಾ ಮಾಲನ್ನು ವಶಪಡಿಸಿಕೊಂಡು ಆರೋಪಿಯಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಿ, ಗಾಂಜಾ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪಿಐ ಲಕ್ಷ್ಮಿನಾರಾಯಣ, ಸಿಬ್ಬಂದಿ ಎಂ.ವಿ.ರಮೇಶ್, ವಿ.ರಂಗನಾಥ್, ಚೇತನ್ಕುಮಾರ್, ಚೇತನ್ಯಾದವ್, ಗಜೇಂದ್ರ ಮತ್ತು ಜೀಪ್ ಚಾಲಕ ಶರಣಬಸಪ್ಪ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾ0ತರಾಜು ಅವರು ಶ್ಲಾಘಿಸಿದ್ದಾರೆ.
ಚಿತ್ರ : ಕೆಜಿಎಫ್ ಸಿ.ಇ.ಎನ್. ಪೊಲೀಸರು ಸುಮಾರು ಒಂದು ಲಕ್ಷ ಎಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್