ಟೆಹ್ರಾನ್, 23 ಜೂನ್ (ಹಿ.ಸ.) :
ಆ್ಯಂಕರ್ : ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ಇತ್ತೀಚೆಗೆ ನಡೆಸಿದ ದಾಳಿಗಳ ಹಿನ್ನೆಲೆಯಲ್ಲಿ, ದೇಶದ ಉನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹಿರಿಯ ಸಲಹೆಗಾರ ಅಲಿ ಶಮ್ಖಾನಿ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಪರಮಾಣು ತಾಣಗಳು ನಾಶವಾದರೂ ಆಟ ಮುಗಿದಿಲ್ಲ. ನಿಜವಾದ ಶಕ್ತಿ ಇನ್ನೂ ನಮ್ಮೊಂದಿಗಿದೆ ಎಂಬ ಸಂದೇಶವನ್ನು ಅವರು ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ನೀಡಿದ್ದಾರೆ.
ಇದು ರಾಜಕೀಯ ವಿವೇಕದಿಂದ ವರ್ತಿಸುವ ಸಮಯ. ದಾಳಿಗಳ ಮೂಲಕ ಏನು ಸಾಧಿಸಲು ಸಾಧ್ಯವಿಲ್ಲ. ಪ್ರತಿಕ್ರಿಯೆಗಳು ಮುಂದುವರಿಯುತ್ತವೆ, ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹೇಳಿಕೆ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ ಹೊರಬಿದ್ದಿದ್ದು, ಇರಾನ್ ತನ್ನ ಪರಮಾಣು ಕಾರ್ಯಕ್ರಮ ಹಾಗೂ ಸೈನಿಕ ತಯಾರಿ ಬಗ್ಗೆ ರಾಜಕೀಯ ಸ್ಥಿರತೆಯ ಸ್ಪಷ್ಟ ಸಂದೇಶ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa