ಕೊಪ್ಪಳ, 22 ಜೂನ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110/33/11ಕೆ.ವಿ ಎಂ.ಯು.ಎಸ್.ಎಸ್ ಗಿಣಿಗೇರಾ ಸ್ಟೇಷನ್ನ ತ್ರೈಮಾಸಿಕ ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ನಡೆಸುತ್ತಿರುವ ಪ್ರಯುಕ್ತ ಜೂನ್ 23 ಸೋಮವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಾನಾ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಎಫ್-8 ಮುಂಡರಗಿ ಎನ್.ಜೆ.ವೈ., ಎಫ್-9 ಲೆಬಗೇರಿ ಎನ್.ಜೆ.ವೈ., ಈ ಎಲ್ಲಾ 11ಕೆವಿ ಮಾರ್ಗಗಳು ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು. ವಿದ್ಯುತ್ ನಿರ್ವಹಣಾ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ.
ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್