ಟೆಹ್ರಾನ್, 21 ಜೂನ್ (ಹಿ.ಸ.) :
ಆ್ಯಂಕರ್ : ಇರಾನ್‌ನ ಪವಿತ್ರ ನಗರವಾದ ಕೋಮ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ವಸತಿ ಕಟ್ಟಡವೊಂದರ ಮೇಲೆ ಬಾಂಬ್ ದಾಳಿಯು ಸಂಭವಿಸಿದೆ. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಕೋಮ್ ನಗರದಲ್ಲಿ ಇರಾನ್‌ನ ಮಹತ್ವದ ಫೋರ್ಡೊ ಯುರೇನಿಯಂ ಪುಷ್ಟೀಕರಣ ಘಟಕವೂ ಇದೆ. ಸಿಎನ್‌ಎನ್ ವರದಿ ಪ್ರಕಾರ, ದಾಳಿಯ ನಂತರ ಕಟ್ಟಡದ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯ ದೃಶ್ಯಗಳು ಸೆರೆಯಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa