ಕೊಪ್ಪಳ, 20 ಜೂನ್ (ಹಿ.ಸ.) :
ಆ್ಯಂಕರ್ : ಗಂಗಾವತಿ ತಾಲ್ಲೂಕಿನ ದಾಸನಾಳ ಗ್ರಾಮದ ಕೆರೆಯಮ್ಮ ಗಂಡ ಶಂಕ್ರಪ್ಪ ಯರಬಟ್ಟಿ(40) ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್, ಠಾಣೆಯಲ್ಲಿ ಗುನ್ನೆ ನಂ:46/2023 ಕಲಂ ನಲ್ಲಿ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ:
ಕಾಣೆಯಾದ ಮಹಿಳೆಯು 5 ಅಡಿ ಎತ್ತರ, ದುಂಡು ಮುಖ, ಸಾದಗಪ್ಪು ಮೈ ಬಣ್ಣ ಹೊಂದಿದ್ದು, ಕಾಣೆಯಾದಾಗ ಸೀರೆ ಮತ್ತು ಜಂಪರ್ ಧರಿಸಿದ್ದರು. ಕನ್ನಡ ಭಾಷೆ, ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್, ಠಾಣೆ ಪಿಐ ದೂ.ಸಂ: 08533-230854, 9480803730 ಎಸ್ಪಿ ಕಚೇರಿ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್