ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲು
ಬೆಂಗಳೂರು, 02 ಜೂನ್ (ಹಿ.ಸ.) : ಆ್ಯಂಕರ್ : ಟೀಮ್ ಇಂಡಿಯಾ ಮತ್ತು ಆರ್ ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ 'ದ ಒನ್ 8 ಕಮ್ಯೂನ್' ಪಬ್ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಅಡಿ, ಪ್ರತ್ಯೇ
Kohili


ಬೆಂಗಳೂರು, 02 ಜೂನ್ (ಹಿ.ಸ.) :

ಆ್ಯಂಕರ್ : ಟೀಮ್ ಇಂಡಿಯಾ ಮತ್ತು ಆರ್ ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ 'ದ ಒನ್ 8 ಕಮ್ಯೂನ್' ಪಬ್ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಅಡಿ, ಪ್ರತ್ಯೇಕ ಧೂಮಪಾನ ಪ್ರದೇಶವಿಲ್ಲದೇ ಧೂಮಪಾನಕ್ಕೆ ಅವಕಾಶ ನೀಡಿರುವ ಆರೋಪವನ್ನು ಆಧಾರವಾಗಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೇ 29ರಂದು ನಡೆದ ದಾಳಿಯಲ್ಲಿ ಎನ್‌ಸಿಆರ್ ದಾಖಲಿಸಲಾಗಿದ್ದು, ನಂತರ ನ್ಯಾಯಾಲಯದ ಅನುಮತಿಯಿಂದ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆಯೂ 2024ರ ಜುಲೈನಲ್ಲಿ ಪಬ್‌ನ್ನು ಸಮಯ ಮೀರಿಸಿ ನಡೆಸಿದ ಪ್ರಕರಣದ ನಡುವೆ ಪ್ರಕರಣ ದಾಖಲಾಗಿತ್ತು.

2024ರ ಡಿಸೆಂಬರ್‌ನಲ್ಲಿ ಬಿಬಿಎಂಪಿಯು ಅಗ್ನಿ ಸುರಕ್ಷತಾ ಪ್ರಮಾಣಪತ್ರ ಇಲ್ಲದ ಕಾರಣದಿಂದ ನೋಟಿಸ್ ನೀಡಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande