ಸಂಡೂರು, 02 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಸಂಡೂರು ತಾಲೂಕಿನ ಮೀನುಗಾರಿಕೆ ಇಲಾಖೆಯ ಜಲಸಂಪನ್ಮೂಲಗಳಾದ ವಡ್ಡಿನ ಕಟ್ಟೆ ಕೆರೆ, ಅಂಕಮ್ಮನಾಳ ಕೆರೆ, ಯು.ರಾಜಾಪುರ ಕೆರೆ, ರಾಘವಪುರ ಕೆರೆಗಳ ಮೀನು ಪಾಶುವಾರು ವಿಲೇವಾರಿಗಾಗಿ 2025-26 ನೇ ಸಾಲಿನಿಂದ ಅರ್ಹ ಮೀನುಗಾರರ ಸಹಕಾರ ಸಂಘ, ಮೀನುಗಾರರ ಉತ್ಪಾದಕರ ಸಂಸ್ಥೆಗಳಿ0ದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆರೆಗಳ ಮೀನು ಪಾಶುವಾರು ಹಕ್ಕನ್ನು 5 ವರ್ಷಗಳ ಕಾಲ ನೇರಗುತ್ತಿಗೆ ಮೂಲಕ ವಿಲೇವಾರಿ ಕೈಗೊಳ್ಳಲು ಅವಕಾಶ ಇದ್ದು, ಜೂ.13 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್