ಮಾದಕವಸ್ತು ಕಳ್ಳಸಾಗಣೆದಾರರಿಂದ ಇಬ್ಬರು ಪೊಲೀಸರಿಗೆ ಗುಂಡೇಟು
ಢಾಕಾ, 19 ಜೂನ್ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶದ ಢಾಕಾದ ಪಲ್ಟನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇಬ್ಬರು ಡಿಬಿ ಪೊಲೀಸ್ ಅಧಿಕಾರಿಗಳು ಕಳ್ಳಸಾಗಣೆದಾರರ ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಎಸ್‌ಐ ಅತಿಕ್ ಹಸನ್ ಅವರ ಹೊಟ್ಟೆಗೆ ಹಾಗೂ ಕ
Firing


ಢಾಕಾ, 19 ಜೂನ್ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶದ ಢಾಕಾದ ಪಲ್ಟನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇಬ್ಬರು ಡಿಬಿ ಪೊಲೀಸ್ ಅಧಿಕಾರಿಗಳು ಕಳ್ಳಸಾಗಣೆದಾರರ ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಎಸ್‌ಐ ಅತಿಕ್ ಹಸನ್ ಅವರ ಹೊಟ್ಟೆಗೆ ಹಾಗೂ ಕಾನ್‌ಸ್ಟೆಬಲ್ ಸುಜೋನ್ ಅವರ ಕಾಲಿಗೆ ಗುಂಡು ತಗುಲಿದೆ. ಇಬ್ಬರನ್ನೂ ತಕ್ಷಣ ಸೆಂಟ್ರಲ್ ಪೊಲೀಸ್ ಆಸ್ಪತ್ರೆಗೆ, ಬಳಿಕ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಐಸಿಯುಗೆ ಸೇರಿಸಲಾಗಿದೆ. ಘಟನೆ ತನಿಖೆಗಾಗಿ ಪೊಲೀಸರು ಕಾರ್ಯಾಚರಣೆಗೆ ತೀವ್ರಗೊಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande