ಹಾಸನ ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ
ಹಾಸನ, 19 ಜೂನ್ (ಹಿ.ಸ.): ಆ್ಯಂಕರ್:ಹಾಸನ ನೂತನ ಜಿಲ್ಲಾಧಿಕಾರಿಯಾಗಿ ಲತಾ ಕುಮಾರಿ ಅವರು ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ಅವರು ನಮ್ಮ ತಂದೆ ತಾಯಿ ಅವರ ಉಪಸ್ಥಿತಿಯಲ್ಲಿ ಉನ್ನತ ಹುದ್ದೆಯ ಅಧಿಕಾರ ಸ್ವೀಕರಿಸಿರುವುದು ತುಂಬ ಸಂತೋಷ ತಂದಿದೆ ಎಂದರು. ತಂದೆ ಅವರಿಂದ ಪೆನ್ನು ಪಡೆದು ಸಿ.ಟಿ.ಸಿ.ಗೆ ಸ
Charge


ಹಾಸನ, 19 ಜೂನ್ (ಹಿ.ಸ.):

ಆ್ಯಂಕರ್:ಹಾಸನ ನೂತನ ಜಿಲ್ಲಾಧಿಕಾರಿಯಾಗಿ ಲತಾ ಕುಮಾರಿ ಅವರು ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು ನಮ್ಮ ತಂದೆ ತಾಯಿ ಅವರ ಉಪಸ್ಥಿತಿಯಲ್ಲಿ ಉನ್ನತ ಹುದ್ದೆಯ ಅಧಿಕಾರ ಸ್ವೀಕರಿಸಿರುವುದು ತುಂಬ ಸಂತೋಷ ತಂದಿದೆ ಎಂದರು. ತಂದೆ ಅವರಿಂದ ಪೆನ್ನು ಪಡೆದು ಸಿ.ಟಿ.ಸಿ.ಗೆ ಸಹಿ ಮಾಡಿದರು. ಮಗಳು ಉನ್ನತ ಹುದ್ದೆಗೇರುವುದು ನಮ್ಮ ತಂದೆ ಅವರ ಕನಸ್ಸಾಗಿತ್ತು ಎಂದು ತಿಳಿಸಿದರು.

ಇದಕ್ಕೂ ಮುನ್ನ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ಅವರು ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ದರ್ಶನ ಪಡೆದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ನೂತನ ಜಿಲ್ಲಾಧಿಕಾರಿ ಅವರನ್ನು ಸ್ವಾಗತಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande