ಸೌಹಾರ್ದ ಪುಟ್ಬಾಲ್ ಪಂದ್ಯದಲ್ಲಿ ಭಾರತಕ್ಕೆ ತಜಿಕಿಸ್ತಾನ್ ಎದುರು ಸೋಲು
ನವದೆಹಲಿ, 19 ಜೂನ್ (ಹಿ.ಸ.) : ಆ್ಯಂಕರ್ : ಅಂತಾರಾಷ್ಟ್ರೀಯ ಸ್ನೇಹಪರ ಫುಟ್ಬಾಲ್ ಪಂದ್ಯದಲ್ಲಿ ಭಾರತದ ಅಂಡರ್-23 ತಂಡವು ಆತಿಥೇಯ ತಜಿಕಿಸ್ತಾನ್ ವಿರುದ್ಧ 2-3 ಗೋಲುಗಳಿಂದ ಸೋಲನುಭವಿಸಿದೆ. ಭಾರತದ ಪರವಾಗಿ ಸುಹೈಲ್ ಅಹ್ಮದ್ ಭಟ್ (33ನೇ ನಿ.) ಮತ್ತು ಪಾರ್ಥಿವ್ ಗೊಗೊಯ್ (85ನೇ ನಿ.) ಗೋಲು ಗಳಿಸಿದರು. ಮಧ
Football


ನವದೆಹಲಿ, 19 ಜೂನ್ (ಹಿ.ಸ.) :

ಆ್ಯಂಕರ್ : ಅಂತಾರಾಷ್ಟ್ರೀಯ ಸ್ನೇಹಪರ ಫುಟ್ಬಾಲ್ ಪಂದ್ಯದಲ್ಲಿ ಭಾರತದ ಅಂಡರ್-23 ತಂಡವು ಆತಿಥೇಯ ತಜಿಕಿಸ್ತಾನ್ ವಿರುದ್ಧ 2-3 ಗೋಲುಗಳಿಂದ ಸೋಲನುಭವಿಸಿದೆ.

ಭಾರತದ ಪರವಾಗಿ ಸುಹೈಲ್ ಅಹ್ಮದ್ ಭಟ್ (33ನೇ ನಿ.) ಮತ್ತು ಪಾರ್ಥಿವ್ ಗೊಗೊಯ್ (85ನೇ ನಿ.) ಗೋಲು ಗಳಿಸಿದರು. ಮಧ್ಯಂತರದಲ್ಲಿ ಆಯುಷ್ ಛೆಟ್ರಿಗೆ ಕೆಂಪು ಕಾರ್ಡ್ ತೋರಿಸಲಾಯಿತು. ಈ ವೇಳೆ ತಜಿಕಿಸ್ತಾನ್ ಎರಡೂ ಸೆಟ್-ಪೀಸ್ ಗಳಿಂದ ಗೋಲು ಗಳಿಸಿ ಗೆಲುವು ಸಾಧಿಸಿತು.

ಈ ಪಂದ್ಯವು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಎಎಫ್‌ಸಿ ಅಂಡರ್-23 ಏಷ್ಯನ್ ಕಪ್ ಅರ್ಹತಾ ಹಂತಕ್ಕೆ ತಯಾರಿ ಭಾಗವಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande