ನಟ ಆರ್ಯ ಮನೆ-ಹೋಟೆಲ್‌ಗಳ ಮೇಲೆ ತೆರಿಗೆ ದಾಳಿ
ಚೆನೈ, 18 ಜೂನ್ (ಹಿ.ಸ.) : ಆ್ಯಂಕರ್ : ತಮಿಳು ನಟ ಹಾಗೂ ಉದ್ಯಮಿ ಆರ್ಯ ವಿರುದ್ಧ ಆದಾಯ ತೆರಿಗೆ ತಪ್ಪು ಆರೋಪದ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಅವರ ಮಾಲೀಕತ್ವದ “ಸೀ ಶೆಲ್” ಹೋಟೆಲ್ ಚೈನ್‌ ಮೇಲೆ ದಾಳಿ ನಡೆಸಿದ್ದಾರೆ. ಚೆನ್ನೈನ ಅಣ್ಣಾ ನಗರ್, ವೆಲ್ಲಾಚೆರಿ, ಕುಟ್ಟಿವಾಕಂ, ಕಿಲ್ಪಾಕ್ ಸೇರಿ
Actor aary


ಚೆನೈ, 18 ಜೂನ್ (ಹಿ.ಸ.) :

ಆ್ಯಂಕರ್ : ತಮಿಳು ನಟ ಹಾಗೂ ಉದ್ಯಮಿ ಆರ್ಯ ವಿರುದ್ಧ ಆದಾಯ ತೆರಿಗೆ ತಪ್ಪು ಆರೋಪದ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಅವರ ಮಾಲೀಕತ್ವದ “ಸೀ ಶೆಲ್” ಹೋಟೆಲ್ ಚೈನ್‌ ಮೇಲೆ ದಾಳಿ ನಡೆಸಿದ್ದಾರೆ.

ಚೆನ್ನೈನ ಅಣ್ಣಾ ನಗರ್, ವೆಲ್ಲಾಚೆರಿ, ಕುಟ್ಟಿವಾಕಂ, ಕಿಲ್ಪಾಕ್ ಸೇರಿದಂತೆ ಹಲವೆಡೆ ಈ ದಾಳಿಗಳು ನಡೆದಿದ್ದು, ಲೆಕ್ಕಪತ್ರಗಳ ಪರಿಶೀಲನೆ ನಡೆಯುತ್ತಿದೆ. ಕೊಚ್ಚಿಯಲ್ಲೂ ಅವರ ಸಂಬಂಧಿತ ಉದ್ಯಮಗಳ ಮೇಲೆ ತನಿಖೆ ನಡೆದಿದೆ.

ಆರ್ಯ ಹಲವಾರು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದು, ನಿರ್ಮಾಪಕ ಹಾಗೂ ಹೋಟೆಲ್, ರಿಯಲ್ ಎಸ್ಟೇಟ್ ಉದ್ಯಮಿಗಳಾಗಿಯೂ ಗುರುತಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande