ಮಣಿಪುರದಲ್ಲಿ ನಾಲ್ವರು ಕೆಸಿಪಿ ಉಗ್ರರ ಬಂಧನ
ಇಂಫಾಲ್, 18 ಜೂನ್ (ಹಿ.ಸ.) : ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ನಾಲ್ವರು ಕೆಸಿಪಿ (ಕಂಗ್ಲೈಪಾಕ್ ಕಾಮ್ಯುನಿಸ್ಟ್ ಪಾರ್ಟಿ) ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರು ರಾಜ್ಯದಲ್ಲಿ ಶಾಂತಿ ಕದಡುವ ಮತ್ತು ಹಣ ಸುಲಿಗೆ ಮಾಡುವ ಕೃತ್ಯಗಳಲ್ಲಿ ತೊಡಗಿದ್ದರು ಎನ್ನ
Arrest


ಇಂಫಾಲ್, 18 ಜೂನ್ (ಹಿ.ಸ.) :

ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ನಾಲ್ವರು ಕೆಸಿಪಿ (ಕಂಗ್ಲೈಪಾಕ್ ಕಾಮ್ಯುನಿಸ್ಟ್ ಪಾರ್ಟಿ) ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರು ರಾಜ್ಯದಲ್ಲಿ ಶಾಂತಿ ಕದಡುವ ಮತ್ತು ಹಣ ಸುಲಿಗೆ ಮಾಡುವ ಕೃತ್ಯಗಳಲ್ಲಿ ತೊಡಗಿದ್ದರು ಎನ್ನಲಾಗಿದೆ.

ಇಂಫಾಲ್ ಪೂರ್ವದ ಲೈರಿಕ್ಯೆಂಗ್‌ಬಮ್ ಪ್ರದೇಶದಲ್ಲಿ ಹಾವೊಬಮ್ ಸಿತಲ್‌ಜಿತ್ ಮೈಟೈ (55) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಂಫಾಲ್ ಪಶ್ಚಿಮದ ಚಿಂಗ್‌ಮೈರಾಂಗ್‌ನಲ್ಲಿ ಕೆಸಿಪಿ (ಎಂಎಫ್‌ಎಲ್) ಸಂಘಟನೆಯ ಸಕ್ರಿಯ ಸದಸ್ಯೆ ಯುಮ್ನಾಮ್ ಜೆನಿಕಾ (22) ಎಂಬವರನ್ನು ಬಂಧಿಸಲಾಗಿದೆ.

ಬಿಷ್ಣುಪುರ ಜಿಲ್ಲೆಯ ನಿಂಗ್‌ಥೌಖೋಂಗ್ ಪ್ರದೇಶದಲ್ಲಿ ಖೋಮ್‌ಡ್ರಾಮ್ ಜಾಯ್ ಸಿಂಗ್ (51) ಹಾಗೂ ಮೈಬಮ್ ಮೆಮ್ಚಾ ದೇವಿ (49) ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರಿಂದ ಗನ್, ಖಾಲಿ ಮ್ಯಾಗಜೀನ್ ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande