ಬ್ರೀ ಇಲಿಂಗ್ ಮತ್ತು ಬೆಲ್ಲಾ ಜೇಮ್ಸ್‌ಗೆ ಕೇಂದ್ರ ಒಪ್ಪಂದ
ವೆಲ್ಲಿಂಗ್ಟನ್, 18 ಜೂನ್ (ಹಿ.ಸ.) : ಆ್ಯಂಕರ್ : ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬ್ರೀ ಇಲಿಂಗ್ ಮತ್ತು ಬೆಲ್ಲಾ ಜೇಮ್ಸ್ ಮೊದಲ ಬಾರಿಗೆ ಕೇಂದ್ರ ಒಪ್ಪಂದ ಪಡೆದಿದ್ದಾರೆ. 2025-26ನೇ ಋತುವಿನ ಪಟ್ಟಿ ಜಾರಿಯಾಗಿದ್ದು, ನಾಯಕಿ ಸೋಫಿ ಡಿವೈನ್ ಮತ್ತು ಹೇಲಿ ಜೆನ್ಸನ್ ನಿವೃತ್ತಿಯಾದ ಹಿನ್ನೆಲೆ ಈ ಇಬ್ಬ
Cricket


ವೆಲ್ಲಿಂಗ್ಟನ್, 18 ಜೂನ್ (ಹಿ.ಸ.) :

ಆ್ಯಂಕರ್ : ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬ್ರೀ ಇಲಿಂಗ್ ಮತ್ತು ಬೆಲ್ಲಾ ಜೇಮ್ಸ್ ಮೊದಲ ಬಾರಿಗೆ ಕೇಂದ್ರ ಒಪ್ಪಂದ ಪಡೆದಿದ್ದಾರೆ. 2025-26ನೇ ಋತುವಿನ ಪಟ್ಟಿ ಜಾರಿಯಾಗಿದ್ದು, ನಾಯಕಿ ಸೋಫಿ ಡಿವೈನ್ ಮತ್ತು ಹೇಲಿ ಜೆನ್ಸನ್ ನಿವೃತ್ತಿಯಾದ ಹಿನ್ನೆಲೆ ಈ ಇಬ್ಬರು ಯುವ ಆಟಗಾರ್ತಿಯರಿಗೆ ಅವಕಾಶ ಸಿಕ್ಕಿದೆ.

ಬ್ರೀಸ್ 21ರ ವಯಸ್ಸಿನಲ್ಲಿ ಈ ಋತುವಿನಲ್ಲಿ 29 ವಿಕೆಟ್ ಕಬಳಿಸಿ ಶ್ರೀಲಂಕಾ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದರು. ಬೆಲ್ಲಾ 16ನೇ ವಯಸ್ಸಿನಲ್ಲಿ ದೇಶೀಯ ಕ್ರಿಕೆಟ್ ಪ್ರವೇಶಿಸಿ, ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವಾಡಿದ್ದರು.

ಬ್ರೀ ಮತ್ತು ಬೆಲ್ಲಾ ಇಬ್ಬರೂ ಭವಿಷ್ಯದ ಪ್ರಮುಖ ಆಟಗಾರ್ತಿಯರು ಎಂದು ಕೋಚ್ ಬೆನ್ ಸಾಯರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande