ನವದೆಹಲಿ, 17 ಜೂನ್ (ಹಿ.ಸ.) :
ಆ್ಯಂಕರ್ : ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಅವರು ಈ ವರ್ಷದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುವ ಮಹಿಳಾ ಏಕದಿನ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಆದರೆ ಅವರು ಟಿ20 ಕ್ರಿಕೆಟ್ ಮುಂದುವರಿಸಲು ನಿರ್ಧರಿಸಿದ್ದಾರೆ.
2006ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಡಿವೈನ್, 19 ವರ್ಷಗಳ ಕಾಲ ನ್ಯೂಜಿಲೆಂಡ್ ಪರ ಆಲ್‌ರೌಂಡರ್ ಆಗಿ ಕಳಸಿದರು. ಅವರು ಏಕದಿನ ಶತಕಗಳಲ್ಲಿ ಸೂಜಿ ಬೇಟ್ಸ್ ನಂತರ ಎರಡನೇ ಸ್ಥಾನದಲ್ಲಿದ್ದು, 100 ಕ್ಕೂ ಹೆಚ್ಚು ವಿಕೆಟ್ ಪಡೆದ ಕೆಲವೇ ಆಟಗಾರ್ತಿಯರಲ್ಲಿ ಒಬ್ಬರು. ವಿಶ್ವಕಪ್ ವೇಳೆ ಅವರು 4000 ರನ್ ದಾಟಿ ಅತ್ಯಧಿಕ ರನ್ ಗಳಿಸಿದ ಮೂರನೇ ನ್ಯೂಜಿಲೆಂಡ್ ಆಟಗಾರ್ತಿಯಾಗುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa