ಇಂಫಾಲ್, 17 ಜೂನ್ (ಹಿ.ಸ.) :
ಆ್ಯಂಕರ್ :ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ನಡೆದ ಶೋಧ ಕಾರ್ಯಾಚರಣೆಗಳಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಗ್ರೆನೇಡ್‌ಗಳು, ಸಂವಹನ ಸಾಧನಗಳು ವಶಪಡಿಸಿಕೊಳ್ಳಲಾಗಿದೆ. ಥೌಬಲ್, ಇಂಫಾಲ್ ಪಶ್ಚಿಮ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆಗಳು ನಡೆದಿದ್ದು, ಒಬ್ಬ ಉಗ್ರನನ್ನೂ ಬಂಧಿಸಲಾಗಿದೆ.
ಬಂಧಿತ ವ್ಯಕ್ತಿ ನಗಮ್‌ಖೋಸತ್ ತೌಥಾಂಗ್ ಅಲಿಯಾಸ್ ಸಸಾತ್ (38), ಸಿಕೆಎನ್ ಡಿಎಫ್/ಎ ಗುಂಪಿನ ಸದಸ್ಯನಾಗಿದ್ದು, ಆತನ ಮೇಲೆ ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕವಸ್ತು ಸಾಗಣೆ, ಸುಲಿಗೆ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa