ಇರಾನ್ ದೂರದರ್ಶನ ಕಚೇರಿ ಮೇಲೆ ಇಸ್ರೇಲ್ ದಾಳಿ
ಟೆಹ್ರಾನ್, 17 ಜೂನ್ (ಹಿ.ಸ.) : ಆ್ಯಂಕರ್ : ಇಸ್ರೇಲ್ ನಿನ್ನೆ ಟೆಹ್ರಾನ್‌ನಲ್ಲಿರುವ ಇರಾನ್‌ನ ಸರ್ಕಾರಿ ದೂರದರ್ಶನ ಸಂಸ್ಥೆ ಐಆರ್‌ಐಬಿ (ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್) ಪ್ರಧಾನ ಕಚೇರಿಯ ಮೇಲೆ ಬಾಂಬ್ ದಾಳಿ ನಡೆಸಿದೆ. ಈ ದಾಳಿ ನೇರ ಪ್ರಸಾರದ ವೇಳೆ ನಡೆದಿದ್ದು, ಆ ಕ್ಷಣದ ದೃಶ್ಯಗ
Attack


ಟೆಹ್ರಾನ್, 17 ಜೂನ್ (ಹಿ.ಸ.) :

ಆ್ಯಂಕರ್ : ಇಸ್ರೇಲ್ ನಿನ್ನೆ ಟೆಹ್ರಾನ್‌ನಲ್ಲಿರುವ ಇರಾನ್‌ನ ಸರ್ಕಾರಿ ದೂರದರ್ಶನ ಸಂಸ್ಥೆ ಐಆರ್‌ಐಬಿ (ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್) ಪ್ರಧಾನ ಕಚೇರಿಯ ಮೇಲೆ ಬಾಂಬ್ ದಾಳಿ ನಡೆಸಿದೆ. ಈ ದಾಳಿ ನೇರ ಪ್ರಸಾರದ ವೇಳೆ ನಡೆದಿದ್ದು, ಆ ಕ್ಷಣದ ದೃಶ್ಯಗಳು ಸೆರೆಯಾಗಿವೆ.

ಸ್ಫೋಟದ ತೀವ್ರತೆಗೆ ವರದಿ ನೀಡುತ್ತಿದ್ದ ನಿರೂಪಕಿ ಸಹರ್ ಎಮಾಮಿ ಅಚ್ಚರಿಗೆ ಒಳಗಾಗಿದ್ದು, ಸ್ಟುಡಿಯೋದಲ್ಲಿ ಗಾಜುಗಳು ಒಡೆದು ಹೊಗೆ ತುಂಬಿದ ದೃಶ್ಯಗಳು ಪ್ರಸಾರಗೊಂಡಿವೆ. ಬಿಬಿಸಿ ಹಾಗೂ ಅಲ್ ಜಜೀರಾ ಈ ವಿಡಿಯೋವನ್ನು ಪ್ರಕಟಿಸಿವೆ.

ಇರಾನ್ ಮೂಲಗಳ ಪ್ರಕಾರ, ದಾಳಿಯಲ್ಲಿ ಕೆಲವೊಂದು ಪ್ರಾಣಹಾನಿ ಸಂಭವಿಸಿರುವ ಶಂಕೆ ಇದ್ದರೂ, ಇಸ್ರೇಲ್ ಅಥವಾ ಇರಾನ್ ಪ್ರಸ್ತುತ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ.

ದಿ ನ್ಯೂಯಾರ್ಕ್ ಟೈಮ್ಸ್ ವರದಿಯಂತೆ, ಇಸ್ರೇಲ್ ಈ ಜೊತೆಗೆ ಇರಾನ್ ಸೇನೆಯ ಮಹತ್ವದ ಘಟಕವಾದ ಕ್ವಡ್ಸ್ ಫೋರ್ಸ್ ಕಮಾಂಡ್ ಕೇಂದ್ರದ ಮೇಲೂ ದಾಳಿ ನಡೆಸಿದೆ. ಇದು ಇರಾನ್‌ನ ವಿದೇಶಾಂಗ ಕಾರ್ಯಾಚರಣೆಗಳನ್ನು ನಿರ್ವಹಿಸುವ ಗುಪ್ತ ಶಾಖೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande