ಜನಗಣತಿಗೆ ಕೇಂದ್ರದಿಂದ ಅಧಿಸೂಚನೆ ಜಾರಿ
ನವದೆಹಲಿ, 16 ಜೂನ್ (ಹಿ.ಸ.) : ಆ್ಯಂಕರ್ : 2027ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯ ಕುರಿತು ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ. ಇದೇ ಮೊದಲು, ಈ ಜನಗಣತಿಯಲ್ಲಿ ಜಾತಿ ಆಧಾರಿತ ಎಣಿಕೆಯನ್ನೂ ಸೇರಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹ
ಜನಗಣತಿಗೆ ಕೇಂದ್ರದಿಂದ ಅಧಿಸೂಚನೆ ಜಾರಿ


ನವದೆಹಲಿ, 16 ಜೂನ್ (ಹಿ.ಸ.) :

ಆ್ಯಂಕರ್ : 2027ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯ ಕುರಿತು ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ. ಇದೇ ಮೊದಲು, ಈ ಜನಗಣತಿಯಲ್ಲಿ ಜಾತಿ ಆಧಾರಿತ ಎಣಿಕೆಯನ್ನೂ ಸೇರಿಸಲಾಗಿದೆ.

ಅಧಿಸೂಚನೆಯ ಪ್ರಕಾರ, ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳಲ್ಲಿ ಜನಗಣತಿ ಅಕ್ಟೋಬರ್ 1, 2026 ರಿಂದ ಆರಂಭವಾಗಲಿದ್ದು ದೇಶದ ಉಳಿದ ಭಾಗದಲ್ಲಿ ಮಾರ್ಚ್ 1, 2027 ರಿಂದ ಪ್ರಾರಂಭವಾಗಲಿದೆ.

ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ—ಮೊದಲು ಮನೆಪಟ್ಟಿ ಕಾರ್ಯಾಚರಣೆ, ನಂತರ ಜನಸಂಖ್ಯಾ ಎಣಿಕೆ. ಪ್ರಕ್ರಿಯೆ ಮೊಬೈಲ್ ಆಪ್ ಮೂಲಕ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಸ್ವಯಂ-ಗಣತಿಗೂ ಅವಕಾಶ ನೀಡಲಾಗುವುದು. ದತ್ತಾಂಶ ಭದ್ರತೆಗೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುತ್ತದೆ.

ಈ ಕಾರ್ಯದಲ್ಲಿ 34 ಲಕ್ಷ ಸಿಬ್ಬಂದಿ ಮತ್ತು 1.3 ಲಕ್ಷ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದು ಸ್ವಾತಂತ್ರ್ಯದ ನಂತರದ 8ನೇ ಜನಗಣತಿ ಆಗಿದ್ದು, ರಾಷ್ಟ್ರದ ಸಮಗ್ರ ಚಿತ್ರಣ ನೀಡಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande