ಮಣಿಪುರದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ-ಸ್ಫೋಟಕ ವಶ
ಇಂಫಾಲ್, 15 ಜೂನ್ (ಹಿ.ಸ.) : ಆ್ಯಂಕರ್ : ಇಂಫಾಲ್ ಪೂರ್ವ ಜಿಲ್ಲೆಯ ಲೈಕೋಟ್ ಕೋಮ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ. ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ 12 ಬೋರ್ ರೈಫಲ್‌ಗಳು, ಪ್ಯಾರಾ ಬಾಂಬ್ (51 ಎಂಎಂ)
Arms


ಇಂಫಾಲ್, 15 ಜೂನ್ (ಹಿ.ಸ.) :

ಆ್ಯಂಕರ್ : ಇಂಫಾಲ್ ಪೂರ್ವ ಜಿಲ್ಲೆಯ ಲೈಕೋಟ್ ಕೋಮ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ.

ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ 12 ಬೋರ್ ರೈಫಲ್‌ಗಳು, ಪ್ಯಾರಾ ಬಾಂಬ್ (51 ಎಂಎಂ), ಹ್ಯಾಂಡ್ ಗ್ರೆನೇಡ್, ಪೊಂಪೆ ಬಾಂಬ್, ಟಿಯರ್ ಸ್ಮೋಕ್ ಶೆಲ್‌ಗಳು, ರಬ್ಬರ್ ಗುಂಡುಗಳು ಹಾಗೂ ಗುಂಡು ನಿರೋಧಕ ಜಾಕೆಟ್ ಸೇರಿವೆ.

ಈ ಸಾಮಗ್ರಿಗಳು ಅಪರಾಧ ಚಟುವಟಿಕೆಗಳಿಗೆ ಬಳಸಲಾಗಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande