ಜೂನ್ 16 ರಂದು ವಿದ್ಯುತ್ ವ್ಯತ್ಯಯ
ಕೊಪ್ಪಳ, 14 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110/33/11 ಕೆ.ವಿ ಎಂಯುಎಸ್‍ಎಸ್ ಹಿರೇಸಿಂಧೋಗಿ ಸ್ಟೇಷನ್‍ನ ತ್ರೈಮಾಸಿಕ ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ಕೆಲಸ ನಡೆಸುತ್ತಿರುವ ಪ್ರಯುಕ್ತ ಈ ಸ್ಟೇಷನ್‍ಗೆ ಒಳಪಡುವ ವಿವಿಧ ಫೀಡರ್‍ಗಳಲ್ಲಿ ಜೂನ್ 16 ರಂದು ಬೆಳಿಗ
ಜೂನ್ 16 ರಂದು ವಿದ್ಯುತ್ ವ್ಯತ್ಯಯ


ಕೊಪ್ಪಳ, 14 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110/33/11 ಕೆ.ವಿ ಎಂಯುಎಸ್‍ಎಸ್ ಹಿರೇಸಿಂಧೋಗಿ ಸ್ಟೇಷನ್‍ನ ತ್ರೈಮಾಸಿಕ ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ಕೆಲಸ ನಡೆಸುತ್ತಿರುವ ಪ್ರಯುಕ್ತ ಈ ಸ್ಟೇಷನ್‍ಗೆ ಒಳಪಡುವ ವಿವಿಧ ಫೀಡರ್‍ಗಳಲ್ಲಿ ಜೂನ್ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಅಂದು 110/33/11 ಕೆ.ವಿ ಎಂಯುಎಸ್‍ಎಸ್ ಹಿರೇಸಿಂಧೋಗಿ ಸ್ಟೇಷನ್‍ಗೆ ಒಳಪಡುವ ಮಾರ್ಗಗಳಾದ ಎಫ್-1 ಬಿಕನಳ್ಳಿ ಎನ್.ಜೆ.ವೈ., ಎಫ್-2 ಹಂದ್ರಾಳ, ಎಫ್-3 ಗುನ್ನಳ್ಳಿ ಎನ್.ಜೆ.ವೈ., ಎಫ್-4 ವದಗನಾಳ, ಎಫ್-5 ಕೋಳೂರು, ಎಫ್ -6 ಚಿಕ್ಕಸಿಂದೋಗಿ, ಎಫ್-7 ಬೂದಿಹಾಳ, ಎಫ್-8 ಗೊಂಡಬಾಳ ಎಮ್.ಐ., ಎಫ್-9 ಗೊಂಡಬಾಳ, ಎಫ್-10 ಹಿರೇಸಿಂಧೋಗಿ ಹಾಗೂ ಎಫ್-11 ಮೈನಳ್ಳಿ, ಈ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು,ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ವಿದ್ಯುತ್ ನಿರ್ವಹಣೆ ಕಾಮಗಾರಿಯು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande