ಮಣಿಪುರದಲ್ಲಿ ಬೃಹತ್ ಕಾರ್ಯಾಚರಣೆ : ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
ಇಂಫಾಲ್, 14 ಜೂನ್ (ಹಿ.ಸ.) : ಆ್ಯಂಕರ್ : ಮಣಿಪುರದ ಐದು ಜಿಲ್ಲೆಗಳ ಹೊರವಲಯದಲ್ಲಿ ಜೂನ್ 13-14ರ ರಾತ್ರಿ ನಡೆದ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ 328 ಶಸ್ತ್ರಾಸ್ತ್ರಗಳು, 10 ಗ್ರೆನೇಡ್‌ಗಳು ಮತ್ತು 7 ಡಿಟೋನೇಟರ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿವೆ. ಮಣಿಪುರ ಪೊಲೀಸರು, ಭಾರತೀಯ ಸೇನೆ, ಅಸ್ಸಾಂ ರೈಫಲ್ಸ
Arams


ಇಂಫಾಲ್, 14 ಜೂನ್ (ಹಿ.ಸ.) :

ಆ್ಯಂಕರ್ : ಮಣಿಪುರದ ಐದು ಜಿಲ್ಲೆಗಳ ಹೊರವಲಯದಲ್ಲಿ ಜೂನ್ 13-14ರ ರಾತ್ರಿ ನಡೆದ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ 328 ಶಸ್ತ್ರಾಸ್ತ್ರಗಳು, 10 ಗ್ರೆನೇಡ್‌ಗಳು ಮತ್ತು 7 ಡಿಟೋನೇಟರ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿವೆ.

ಮಣಿಪುರ ಪೊಲೀಸರು, ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಸಿಎಪಿಎಫ್‌ಗಳ ಜಂಟಿ ತಂಡಗಳು ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಿವೆ.

ವಶಪಡಿಸಲಾದ ಶಸ್ತ್ರಾಸ್ತ್ರಗಳಲ್ಲಿ 151 ಎಸ್‌ಎಲ್‌ಆರ್‌ಗಳು, 65 ಐಎನ್‌ಎಸ್‌ಎಎಸ್ ರೈಫಲ್‌ಗಳು, 5 ಕಾರ್ಬೈನ್ ಗನ್‌ಗಳು, 2 ಎಂಪಿ-5 ಗನ್‌ಗಳು ಸೇರಿದಂತೆ ಮಾರಕ ಆಯುಧಗಳು ಸೇರಿವೆ.

ಈ ಶಸ್ತ್ರಾಸ್ತ್ರಗಳಲ್ಲಿ ಲ್ಯಾಥೋಡ್ ಬಾಂಬ್‌ಗಳು, ಮ್ಯಾಗಜೀನ್‌ಗಳು ಮತ್ತು ಬಹು ಪ್ರಮಾಣದ ಜೀವಂತ ಕಾರ್ಟ್ರಿಡ್ಜ್‌ಗಳೂ ಸೇರಿವೆ.

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೂ ಮುನ್ನ ಇಂತಹ ಶೋಧ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande