ತಂತ್ರಜ್ಞಾನ ಬಡವರ ಸಬಲೀಕರಣಕ್ಕೆ ಬಲವಾದ ಸಾಧನ : ಪ್ರಧಾನಿ ಮೋದಿ
ನವದೆಹಲಿ, 12 ಜೂನ್ (ಹಿ.ಸ.) : ಆ್ಯಂಕರ್ : ಡಿಜಿಟಲ್ ಇಂಡಿಯಾ ಯೋಜನೆಗೆ 11 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನವು ಬಡವರ ಸಬಲೀಕರಣಕ್ಕೆ ಪ್ರಮುಖ ಸಾಧನವಾಗಿದೆ ಎಂದು ತಿಳಿಸಿದ್ದಾರೆ. ಸೇವಾ ವಿತರಣೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿದೆಯೆಂದು ಅವರು ಎಕ್
Pm


ನವದೆಹಲಿ, 12 ಜೂನ್ (ಹಿ.ಸ.) :

ಆ್ಯಂಕರ್ : ಡಿಜಿಟಲ್ ಇಂಡಿಯಾ ಯೋಜನೆಗೆ 11 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನವು ಬಡವರ ಸಬಲೀಕರಣಕ್ಕೆ ಪ್ರಮುಖ ಸಾಧನವಾಗಿದೆ ಎಂದು ತಿಳಿಸಿದ್ದಾರೆ.

ಸೇವಾ ವಿತರಣೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿದೆಯೆಂದು ಅವರು ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

ಯುವಕರ ನಾವೀನ್ಯತೆ ಮತ್ತು ತಂತ್ರಜ್ಞಾನದ ಉಪಯೋಗದಿಂದ ಭಾರತ ಸ್ವಾವಲಂಬಿ ತಾಂತ್ರಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಡಿಜಿಟಲ್ ಇಂಡಿಯಾ ಮೌನ ಕ್ರಾಂತಿಯಾಗಿ ದೇಶದ ಪ್ರತಿ ನಾಗರಿಕನಿಗೂ ಅಧಿಕಾರದ ಸುಲಭ ಪ್ರವೇಶ ಮತ್ತು ಸಮಾನ ಅವಕಾಶಗಳನ್ನು ಒದಗಿಸುತ್ತಿದೆ.

ಈ ಯೋಜನೆಯ ಪರಿಣಾಮವಾಗಿ ದೂರದ ಹಳ್ಳಿಗಳವರೆಗೆ ಇಂಟರ್ನೆಟ್, ನೈಜ-ಸಮಯದ ಪಾವತಿಗಳು ಹಾಗೂ ಸೇವೆಗಳ ಸುಲಭ ಲಭ್ಯತೆ ಸಾಧ್ಯವಾಗಿವೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande