ಕಿರಿಯ ವಿಜ್ಞಾನಿಯಾಗಿ ಎಸ್.ಡಿ.ಸಿ ಕಾಲೇಜಿನ ದರ್ಶನ್ ಆಯ್ಕೆ
ಎಸ್.ಡಿ.ಸಿ ಕಾಲೇಜಿನ ದರ್ಶನ್ ಕಿರಿಯ ವಿಜ್ಞಾನಿಯಾಗಿ ಆಯ್ಕೆ
ಕೋಲಾರದ ಎಸ್.ಡಿ.ಸಿ. ಕಾಲೇಜಿನ ಹಳೆಯ ವಿದ್ಯಾರ್ಥಿ ದರ್ಶನ್ ಯೂರೋಪಿನ ಎಸಿಜಿ ಕಂಪನಿಯಲ್ಲಿ ಕಿರಿಯ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಅವರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.


ಕೋಲಾರ, ೧೧ ಜೂನ್ (ಹಿ.ಸ) :

ಆ್ಯಂಕರ್ : ಕೋಲಾರದ ಹೊರವಲಯದಲ್ಲಿರುವ ಎಸ್.ಡಿ.ಸಿ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿ, ಸ್ನಾತಕೋತ್ತರ ಪದವಿಯನ್ನು ರಸಾಯನಶಾಸ್ತç ವಿಭಾಗದಲ್ಲಿ ಪಡೆಯುತ್ತಿರುವ ಕುಮಾರ ದರ್ಶನ್ ಎಂ.ಆರ್ ರವರು ಯೂರೋಪಿನ ಪ್ರತಿಷ್ಠಿತ ಎ.ಸಿ.ಜಿ ಕಂಪನಿಯಲ್ಲಿ ಜಿಲೆಟಿನ್ ತಯಾರಿಕಾ ಘಟದಲ್ಲಿ ಕಿರಿಯ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಅವರು ಜಿಲೆಟಿನ್ ತಯಾರಿಕೆಯ ಬಗ್ಗೆ ಸಂಶೋಧನೆ ವಿಭಾಗದಲ್ಲಿ ಕಾರ್ಯವನ್ನು ನಿರ್ವಹಿಸಲು ಯೂರೋಪ್‌ಗೆ ತೆರಳಲಿದ್ದಾರೆ. ಎಸ್.ಡಿ.ಸಿ ಕಾಲೇಜಿನ ಮೈಲಿಗಲ್ಲಿಗೆ ಈ ಸಾಧನೆಯು ಸೇರ್ಪಡೆಯಾಗಿದೆ. ಈ ಸಾಧನೆಯನ್ನು ಮಾಡಿದ ಎಸ್.ಡಿ.ಸಿ ಕಾಲೇಜಿನ ವಿದ್ಯಾರ್ಥಿಗೆ ಕಾಲೇಜಿನ ಕಾರ್ಯದರ್ಶಿಗಳಾದ ಉಷಾಗಂಗಾಧರ, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಯವರು ಅಭಿನಂದಿಸಿ ಇವರ ಪ್ರಯಾಣವು ಸುಖಕರವಾಗಲಿ ಹಾಗೂ ಇವರು ಇನ್ನು ಉತ್ತಮವಾದ ಸಾಧೆನಯನ್ನು ಮಾಡಿ ನಮ್ಮ ದೇಶದ,ರಾಜ್ಯದ,ಜಿಲ್ಲೆಯ ಹಾಗೂ ನಮ್ಮ ಕಾಲೇಜಿನ ಕೀರ್ತಿಯನ್ನು ಎತ್ತಿಹಿಡಿಯಲಿ ಎಂದು ಶುಭವನ್ನು ಹಾರೈಸಿದ್ದಾರೆ.

ಚಿತ್ರ ; ಕೋಲಾರದ ಎಸ್.ಡಿ.ಸಿ. ಕಾಲೇಜಿನ ಹಳೆಯ ವಿದ್ಯಾರ್ಥಿ ದರ್ಶನ್ ಯೂರೋಪಿನ ಎಸಿಜಿ ಕಂಪನಿಯಲ್ಲಿ ಕಿರಿಯ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಅವರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande