ಹೊಸಪೇಟೆ , 11 ಜೂನ್ (ಹಿ.ಸ.) :
ಆ್ಯಂಕರ್ : 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಮೈಸೂರು ಸಂಸ್ಥೆಯ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನ ಡೀನ್ ತಿಳಿಸಿದ್ದಾರೆ.
ಬೋಧನಾ ವಿಷಯಕ್ಕೆ ಪ್ರಾಯೋಗಿಕ ಮತ್ತು ಥಿಯರಿ, ಭಾಷಾ ವಿಷಯ ಸೇರಿದಂತೆ ಅನ್ವಯ ಕಲೆ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ, ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ, ಕಲಾ ಇತಿಹಾಸ, ಕನ್ನಡ, ಇಂಗ್ಲೀಷ್, ಹಿಂದಿ, ಭಾರತ ಮತ್ತು ಭಾರತೀಯ ಸಂವಿಧಾನ ಹಾಗೂ ಸಂವಿಧಾನದ ಮೌಲ್ಯಗಳು, ಸೈಬರ್ ಸೆಕ್ಯೂರಿಟಿ, ಅರ್ಟಿಫಿಶಿಯಲ್ ಇಂಟಲ್ಜೆನ್ಸಿ ವಿಷಯಗಳಿಗೆ ಗೌರವ ಸಂಭಾವನೆ ಅಧಾರದ ಮೇಲೆ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಜೂ.16 ರ ಸಂಜೆ 5:30 ಗಂಟೆಯೊಳಗೆ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗಿದೆ. ಜೂ.26 ರಂದು ಬೆಳಿಗ್ಗೆ 11 ಗಂಟೆಗೆ ಸಂದರ್ಶನವನ್ನು ಸಂಸ್ಥೆಯಲ್ಲಿ ನಡೆಸಲಾಗುವುದು. ತರಗತಿಗಳು ಅನ್ವಯವಾಗುವಂತೆ ಕಾರ್ಯನಿರ್ವಹಿಸಲು ತಿಳಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಂತರ್ಜಾಲ ವಿಳಾಸ ಅಂತರ್ಜಾಲದ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ದೂ.08212438931 ನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್